ಕರ್ನಾಟಕ

karnataka

ಇಂದೇ 'ಅಪ್ಪು' ಅಂತ್ಯಸಂಸ್ಕಾರ: ಸಚಿವ ಅಶ್ವತ್ಥ್​ ನಾರಾಯಣ್​

By

Published : Oct 30, 2021, 11:17 AM IST

Updated : Oct 30, 2021, 11:58 AM IST

ಹೃದಯಾಘಾತದಿಂದ ನಿಧನರಾದ ನಟ ಪುನೀತ್​ ರಾಜ್​ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಇಂದೇ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಅಶ್ವತ್ಥ್​ ನಾರಾಯಣ್​ ತಿಳಿಸಿದ್ದಾರೆ.

minister Ashwath narayana reaction on puneeth rajkumar funeral
ಸಚಿವ ಅಶ್ವತ್ಥ್​ ನಾರಾಯಣ್​

ಬೆಂಗಳೂರು:ಹೃದಯಾಘಾತದಿಂದ ನಿಧನರಾದ ನಟ ಪುನೀತ್​ ರಾಜ್​ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಇಂದೇ ನಡೆಸಲು ನಿರ್ಧರಿಸಲಾಗಿದೆ, ಅಂತಿಮ ಸಂಸ್ಕಾರಕ್ಕೆ ಸರ್ಕಾರದಿಂದ ಸಕಲ ಸಿದ್ಧತೆ ಆಗ್ತಿದೆ ಎಂದು ಸಚಿವ ಅಶ್ವತ್ಥ್​ ನಾರಾಯಣ್​ ತಿಳಿಸಿದ್ದಾರೆ.

ನಮ್ಮೆಲ್ಲರ ನೆಚ್ಚಿನ ನಟ, ನಾಡಿನ ಹೆಮ್ಮೆಯ ಮಗ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೈವಾದೀನರಾಗಿದ್ದಾರೆ, ಅವರ ಸಾವು ನಂಬಲಾಗುತ್ತಿಲ್ಲ. ಅವರ ಅಗಲಿಕೆಯನ್ನು ಒಪ್ಪಲು ಆಗ್ತಾ ಇಲ್ಲ, ದೈಹಿಕವಾಗಿ ಚಟುವಟಿಕೆಯಿಂದ, ಆರೋಗ್ಯವಾಗಿದ್ದ, 40 ಕಿ.ಮೀ ಓಡುವ ಸಾಮರ್ಥ್ಯದ ವ್ಯಕ್ತಿ ತೀರಿರುವುದು ಆಶ್ಚರ್ಯ ಆಗಿದೆ ಎಂದ್ರು.

ಹವಾಮಾನ ಸ್ಥಿತಿ ಗಮನಿಸಿ, ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದೆ.ಮೂರು ಗಂಟೆ ವೇಳೆಗೆ ಮೆರವಣಿಗೆ ಆರಂಭವಾಗಬಹುದು ಎಂದು ಸಿಎಂ ತೀರ್ಮಾನಿಸಿದ್ದಾರೆ. ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಲಿದೆ. ಅವರ ಮಗಳು 4 - 5 ಗಂಟೆಗೆ ಬರುವ ಸಾಧ್ಯತೆ ಇದೆ. ಅವರು ನೇರವಾಗಿ ಕಂಠೀರವ ಸ್ಟುಡಿಯೋಗೆ ಅಥವಾ ಮೆರವಣಿಗೆಗೆ ಸೇರಿಕೊಳ್ಳಬಹುದು ಎಂದು ಹೇಳಿದ್ರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿಕೆ:

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಮಾಹಿತಿ

ಪುನೀತ್ ರಾಜ್ ಕುಮಾರ್ ದಿವಂಗತರಾದ ಮೇಲೆ ಅವರ ಅಭಿಮಾನಿಗಳು ನಿರಂತರವಾಗಿ ಬರುತ್ತಿದ್ದಾರೆ. ಭದ್ರತಾ ವ್ಯವಸ್ಥೆ ಒದಗಿಸಿದ್ದೇವೆ. ಜನರು ಇದೇ ರೀತಿ ಸಹಕಾರ ಕೊಡಲಿ ಎಂದು ಭಾವಿಸಿದ್ದೇನೆ. ಇಂದು ಕುಟುಂಬದವರ ತೀರ್ಮಾನದಂತೆ ಮುಂದಿನ ವ್ಯವಸ್ಥೆ ಮಾಡುತ್ತೇವೆ. ಅಂತ್ಯಸಂಸ್ಕಾರಕ್ಕೆ ಆಗಬೇಕಾದ ವ್ಯವಸ್ಥೆ ಮಾಡುತ್ತೇವೆ.

ಅಂತ್ಯಸಂಸ್ಕಾರ ಸಂಜೆ ನಡೆಯುವ ಸಾಧ್ಯತೆ ಇದೆ. ಕುಟುಂಬದ ನಿರ್ಧಾರದ ಮೇಲೆ ನಿಂತಿದೆ. ಸೂಕ್ತವಾದ ಭದ್ರತೆ ಸಿದ್ಧತೆ ಇದೆ. ಪಾರ್ಥೀವ ಶರೀರ ಕಂಠೀರವ ಸ್ಟೇಡಿಯಂನಿಂದ ಸ್ಟುಡಿಯೋದವರೆಗೆ ಹೋಗುವ ಸಂದರ್ಭದಲ್ಲಿ ರಸ್ತೆ ಬದಲಾವಣೆ ಮಾಡಲಾಗುತ್ತದೆ. ನಿನ್ನೆ ರಾತ್ರಿ ನೂಕು ನುಗ್ಗಲಾದ ಸಮಯದಲ್ಲಿ ಗಾಯಗೊಂಡ ಪೊಲೀಸರನ್ನು ಮಲ್ಲಿಗೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಮಲ್​ ಪಂತ್​ ತಿಳಿಸಿದ್ದಾರೆ.

ಇದನ್ನೂ ಓದಿ:‘ಕನ್ನಡ ಚಿತ್ರರಂಗದ ಮತ್ತೊಂದು ಮುಕುಟ ಕಳಚಿದೆ.. ಅಣ್ಣಾವ್ರು, ಶಂಕ್ರಣ್ಣನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ: ವಿಜಯ್​​

Last Updated : Oct 30, 2021, 11:58 AM IST

ABOUT THE AUTHOR

...view details