ಕರ್ನಾಟಕ

karnataka

ETV Bharat / state

ಸೈಬರ್ ಭದ್ರತೆ, ಡೇಟಾ ಸೆಂಟರ್‌ ನೂತನ ನೀತಿ ಪ್ರಕಟವಾಗಲಿದೆ:ಸಚಿವ ಅಶ್ವತ್ಥ ನಾರಾಯಣ್

ಸೈಬರ್ ಭದ್ರತೆ ಮತ್ತು ಡೇಟಾ ಸೆಂಟರ್‌ಗಳನ್ನು ಕುರಿತು, ನೂತನ ನೀತಿ ಪ್ರಕಟವಾಗಲಿದೆ ಎಂದು ಸಚಿವ ಸಚಿವ ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.

By

Published : Sep 15, 2021, 8:07 AM IST

minister ashwath narayan speech in  India innovation summit 2021
ಸಚಿವ ಅಶ್ವತ್ಥ ನಾರಾಯಣ್

ಬೆಂಗಳೂರು:ಸೈಬರ್ ಭದ್ರತೆ ಮತ್ತು ಡೇಟಾ ಸೆಂಟರ್‌ಗಳನ್ನು ಕುರಿತು, ನೂತನ ನೀತಿಯೊಂದನ್ನು ಸರ್ಕಾರ ಪ್ರಕಟಿಸಲಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಚಿವ ಡಾ.ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.

ಕಾನೈಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟದಿಂದ ಆಯೋಜಿಸಲಾದ 5 ದಿನಗಳ 'ಇಂಡಿಯಾ ಇನೋವೇಷನ್ ಸಮಿಟ್ 2021' ಮಂಗಳವಾರ ಆರಂಭವಾಗಿದ್ದು, ಡೇಟಾ ವಿಜ್ಞಾನ, ರೋಬೋಟಿಕ್ ವಿರೋಸೇಸ್ ಮತ್ತು ರಕ್ಷಣಾ ವಿಭಾಗಗಳಲ್ಲಿ, ಉತ್ಕೃಷ್ಟತೆ ಮತ್ತು ನವೀನತೆಯ ಎಂಟು ಕೇಂದ್ರಗಳನ್ನು ಒಳಗೊಂಡಂತೆ ಈಗ ಕರ್ನಾಟಕ ಸರ್ಕಾರ ನಿರ್ಮಿಸುತ್ತಿರುವ ಪರಿಸರ ವ್ಯವಸ್ಥೆಯನ್ನು ಉದ್ಘಾಟನಾ ಸಮಾರಂಭದಲ್ಲಿ ಘೋಷಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣಾ ರೆಡ್ಡಿ, ಮುಂದಿನ ಎರಡು ತಿಂಗಳುಗಳ ಒಳಗೆ ಸೈಬರ್ ಭದ್ರತೆ ಮತ್ತು ಡೇಟಾ ಸೆಂಟರ್‌ಗಳನ್ನು ಕುರಿತ ನೀತಿಗಳನ್ನು ಪ್ರಕಟಿಸುವುದಾಗಿ ತಿಳಿಸಿದರು.

ಇದನ್ನೂ ಓದಿ:ಅವಸರದಲ್ಲಿ ಯಾವುದೇ ದೇವಾಲಯ ಒಡೆಯುವಂತಿಲ್ಲ : ಸಿಎಂ ಬಸವರಾಜ ಬೊಮ್ಮಾಯಿ

ಹೊಸ ಆವಿಷ್ಕಾರಗಳಿಗೆ ಅವಕಾಶ

ಕರ್ನಾಟಕ ಮತ್ತು ಅಲ್ಲಿಂದ ಆಚೆಗೂ ನವೀನತೆಗಳಿಗೆ ಅವಕಾಶ ಮಾಡಿಕೊಡಲು ವಾಸ್ತವವಾಗಿ ಕರ್ನಾಟಕ ಉತ್ಸುಕವಾಗಿದೆ ಎಂದು ಅವರು ಇದೇ ವೇಳೆ ಹೇಳಿದರು. ಕರ್ನಾಟಕ ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ನವೀನತೆಯ ಭಾಗವಾಗಿದೆ. ಇವೆಲ್ಲವೂ ರಾಜ್ಯದ ಜನರ ಜೀವನದಲ್ಲಿ ಅಪಾರ ವ್ಯತ್ಯಾಸ ಉಂಟು ಮಾಡಿದೆ ಎಂದರು.

ಇದನ್ನೂ ಓದಿ:ಬೆಂಗಳೂರು:ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ ಮೇಲಿಂದ ಬಿದ್ದು ಯುವತಿ ಸೇರಿ ಇಬ್ಬರ ದುರ್ಮರಣ

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸ್ಥಾಪಿಸುವಲ್ಲಿ ಸರ್ಕಾರದ ಉಪಕ್ರಮ ಕುರಿತು ಸಚಿವ ಅಶ್ವತ್ಥ ನಾರಾಯಣ್​ ಮಾತನಾಡಿ, ಅದು ಜನರ ಜೀವನಗಳನ್ನು ಪರಿವರ್ತಿಸುವ ಭರವಸೆ ನೀಡಿದೆ. ಎಲ್ಲ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧವಾಗಿದ್ದು, ಕೈಗಾರಿಕಾ ಅಭಿವೃದ್ಧಿಗೆ ಬದ್ಧ ಎಂದು ಸಚಿವರು ಭರವಸೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಡಿ ತರಲಾಗುತ್ತಿರುವ ಬದಲಾವಣೆಗಳು ಮತ್ತು ಇದರಿಂದ ಲಭಿಸಲಿರುವ ಅವಕಾಶಗಳ ಕುರಿತು ಸಚಿವರು ಒತ್ತಿ ಹೇಳಿದರು. ಈ ನೀತಿಯಲ್ಲಿ ಕೊಡುಗೆಗಳಿಗೆ ಸಂಬಂಧಿಸಿದಂತೆ ಕೈಗಾರಿಕೆ ಪ್ರಮುಖ ಪಾತ್ರವಹಿಸಲಿದೆ ಎಂದರಲ್ಲದೇ, ಕೈಗಾರಿಕೆಯೊಂದಿಗೆ ಪಾಲುದಾರಿಕೆಗೆ ಅವಕಾಶ ಮಾಡಿಕೊಡಲು ವ್ಯವಸ್ಥೆಯನ್ನು ಪುನರ್‌ರೂಪಿಸಿ ಪರಿಷ್ಕರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ಕರ್ನಾಟಕದಲ್ಲಿ ಶಿಕ್ಷಣದ ಗುಣಮಟ್ಟದಲ್ಲಿ ಅಪಾರ ಬದಲಾವಣೆ ತರಲಿರುವ ಮತ್ತು ಅವಕಾಶಗಳನ್ನು ತೆರೆಯಲಿರುವ ಡಿಜಿಟಲ್ ಮತ್ತು ಹಣಕಾಸು ಸಾಕ್ಷರತೆಗಾಗಿ ಕೈಗಾರಿಕೆಯೊಂದಿಗೆ ಸರ್ಕಾರ ಸಂಪರ್ಕ ಸೃಷ್ಟಿಸುತ್ತಿದೆ ಎಂದು ಅಶ್ವತ್ಥ ನಾರಾಯಣ್​ ಹೇಳಿದ್ರು.

ABOUT THE AUTHOR

...view details