ಕರ್ನಾಟಕ

karnataka

ETV Bharat / state

ಮೂರನೇ ಅಲೆ ನಿಯಂತ್ರಣದಲ್ಲಿದೆ, ಯಾರೂ ಆತಂಕಪಡಬೇಕಿಲ್ಲ: ಸಚಿವ ಅಶ್ವತ್ಥ ನಾರಾಯಣ - Corona latest news

ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ‌ಮೂಲಕ ಮೂರನೇ ಅಲೆ ತಡೆಯಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಸಚಿವ ಡಾ.ಕೆ.ಅಶ್ವತ್ಥ ನಾರಾಯಣ ತಿಳಿಸಿದರು.

Minister Ashwath Narayan
ಸಚಿವ ಅಶ್ವತ್ಥ್ ನಾರಾಯಣ್

By

Published : Aug 19, 2021, 2:24 PM IST

ಬೆಂಗಳೂರು: ಮೂರನೇ ಅಲೆ ನಿಯಂತ್ರಣದಲ್ಲಿದ್ದು, ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ‌ಮೂಲಕ ಮೂರನೇ ಅಲೆ ತಡೆಯಲಾಗುತ್ತಿದೆ ಎಂದು ಸಚಿವ ಡಾ.ಕೆ.ಅಶ್ವತ್ಥ ನಾರಾಯಣ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಜನರಿಗೆ ಅನಿಶ್ಚಿತತೆ ಇದೆ. ಯಾರಿಗೂ ಆತಂಕ ಬೇಡ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ‌ಮೂಲಕ ಮೂರನೇ ಅಲೆ ತಡೆಯಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಲಸಿಕೆ ‌ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಬೆಡ್​ಗಳ ಕೊರತೆಯಿಲ್ಲ. ಆಕ್ಸಿಜನ್ ಕೊರತೆಯಾಗದ ಹಾಗೆ ಕ್ರಮ ತೆಗೆದುಕೊಂಡಿದ್ದೇವೆ ಎಂದರು.

ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನೆ ‌ಮಾಡಲಾಗುತ್ತಿದೆ. ವೈದ್ಯಕೀಯ ಕೊರತೆಗಳನ್ನು ಸರ್ಕಾರ ‌ನೀಗಿಸಿಕೊಂಡಿದೆ. ಸಿಬ್ಬಂದಿ ಕೊರತೆ ಕೂಡ ಬಗೆಹರಿಸಿದ್ದೇವೆ. ಸರ್ಕಾರ ಸರ್ವ ರೀತಿಯಲ್ಲೂ ತಯಾರಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ನಿವಾಸ ಪಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂಗೆ ತಮ್ಮ‌ ಮನೆಯಿಂದ ಕೆಲಸ ನಿರ್ವಹಣೆ ಕಷ್ಟವಾಗುತ್ತಿದೆ. ಸಾರ್ವಜನಿಕರು ಮನೆ ಮುಂದೆ ಸೇರುತ್ತಿದ್ದಾರೆ. ಹಾಗಾಗಿ ರೋಡ್ ಬ್ಲಾಕ್ ಆಗುತ್ತಿದೆ. ನಾನಿದ್ದ ಸರ್ಕಾರಿ‌ ಮನೆಗೆ ಸಿಎಂ ಬರುತ್ತಿದ್ದಾರೆ. ಹಾಗಾಗಿ ನನಗೆ ಬೇರೆ ಹಂಚಿಕೆ ಆಗುತ್ತದೆ ಎಂದರು.

ABOUT THE AUTHOR

...view details