ಕರ್ನಾಟಕ

karnataka

ETV Bharat / state

ಸಮವಸ್ತ್ರ ನಿಗದಿಯಾದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲ್​ಗೆ ಅವಕಾಶ ಇಲ್ಲ: ಸಚಿವ ಅಶ್ವತ್ಥ ನಾರಾಯಣ - ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲ್ ಧರಿಸುವ ವಿಚಾರಕ್ಕೆ ಅಶ್ವತ್ಥ ನಾರಾಯಣ ಸ್ಪಷ್ಟನೆ

ಕಾಲೇಜುಗಳಲ್ಲಿ ಹಿಜಾಬ್​​, ಕೇಸರಿ ಶಾಲು ಧರಿಸುವ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Minister Ashwath Narayan gave clarification about wearing of hijab- saffron issue
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲ್ ಧರಿಸುವ ವಿಚಾರಕ್ಕೆ ಅಶ್ವತ್ಥ ನಾರಾಯಣ ಸ್ಪಷ್ಟನೆ

By

Published : Feb 18, 2022, 6:02 PM IST

ಬೆಂಗಳೂರು:ಎಲ್ಲೆಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯವರು ಸಮವಸ್ತ್ರ ನಿಗದಿ ಮಾಡಿದ್ದಾರೋ ಅಲ್ಲಿ ಹಿಜಾಬ್, ಕೇಸರಿ ಶಾಲು ಹಾಕಲು ಅವಕಾಶ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲ್ ಧರಿಸುವ ವಿಚಾರಕ್ಕೆ ಅಶ್ವತ್ಥ ನಾರಾಯಣ ಸ್ಪಷ್ಟನೆ

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಗೊಂದಲ ಬೇಡ. ಸ್ಪಷ್ಟವಾಗಿ ಹೇಳಿಕೆ ನೀಡಲಾಗಿದೆ. ಈಗಲೂ ಪದವಿ ಕಾಲೇಜುಗಳಲ್ಲಿ ಎಲ್ಲೆಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯವರು ಸಮವಸ್ತ್ರ ನಿಗದಿ ಮಾಡಿದ್ದಾರೆ. ಅಲ್ಲಿ ಹಿಜಾಬ್ ಆಗಲಿ, ಕೇಸರಿ ಶಾಲ್ ಆಗಲಿ ಹಾಕುವಂತೆ ಇಲ್ಲ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಯಾವ ಕಾಲೇಜುಗಳಲ್ಲಿ ಸಮವಸ್ತ್ರ ನಿಗದಿ ಮಾಡಿಲ್ಲವೋ ಅಲ್ಲಿ ಯಾವುದೇ ರೀತಿಯ ನಿರ್ಬಂಧ ಇಲ್ಲ. ಹಿಜಾಬ್, ಕೇಸರಿ ಶಾಲು ಏನು ಬೇಕಾದ್ರೂ ಹಾಕಿಕೊಳ್ಳಬಹುದು. ಈ ಬಗ್ಗೆ ನಾನೂ ಈಗಾಗಲೇ ಲಿಖಿತ ರೂಪದಲ್ಲಿ ತಿಳಿಸಿದ್ದೇನೆ ಎಂದರು.

ಇದನ್ನೂ ಓದಿ: ಹಿಜಾಬ್ ವಿವಾದ: ಅರ್ಜಿಗಳ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್

For All Latest Updates

TAGGED:

ABOUT THE AUTHOR

...view details