ಬೆಂಗಳೂರು:ನೂತನ ಅರಣ್ಯ ಸಚಿವ ಸಚಿವ ಅರವಿಂದ ಲಿಂಬಾವಳಿಯವರು ವೃಕ್ಷ ಮಾತೆ ತಿಮ್ಮಕ್ಕ ಅವರನ್ನು ದಾಸರಹಳ್ಳಿಯ ಮಂಜುನಾಥ ನಗರದ ಮನೆಗೆ ತೆರಳಿ ಭೇಟಿಯಾದರು.
ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಮನೆಗೆ ಸಚಿವ ಅರವಿಂದ ಲಿಂಬಾವಳಿ ಭೇಟಿ - minister aravinds limbavali meets Salumarada timmakka
ನೂತನ ಅರಣ್ಯ ಸಚಿವ ಸಚಿವ ಅರವಿಂದ ಲಿಂಬಾವಳಿಯವರು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರನ್ನು ಬೆಂಗಳೂರಿನ ದಾಸರಹಳ್ಳಿಯ ಮಂಜುನಾಥ ನಗರದ ಅವರ ಮನೆಗೆ ತೆರಳಿ ಭೇಟಿಯಾದರು.
ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಮನೆಗೆ ಸಚಿವ ಅರವಿಂದ ಲಿಂಬಾವಳಿ ಭೇಟಿ
ಮುಂದಿನ ದಿನಗಳಲ್ಲಿ ಮರಗಳನ್ನು ಬೆಳೆಸಲು ಯಾವ ಕ್ರಮಗಳನ್ನು ಅನುಸರಿಸಬೇಕು. ಯಾವ ಮರಗಳನ್ನು ಬೆಳೆಸಬೇಕು, ಪರಿಸರಕ್ಕೆ ಉಪಯೋಗವಾಗುವಂತಹ ಮರಗಿಡಗಳನ್ನು ಬೆಳೆಸಬಹುದು ಎಂಬುದರ ಬಗ್ಗೆ ಸಾಲುಮರದ ತಿಮ್ಮಕ್ಕ ಅವರ ಬಳಿ ಸಚಿವರು ಸಲಹೆ ಸೂಚನೆಗಳನ್ನು ಪಡೆದರು. ಬಗ್ಗೆ ಸಚಿವ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.
ಸೊಂಟದ ಮೂಳೆ ಶಸ್ತ್ರಚಿಕಿತ್ಸೆ ಪಡೆದು ಮನೆಯಲ್ಲೆ ವಿಶ್ರಾಂತಿ ಪಡೆಯುತ್ತಿದ್ದ ತಿಮ್ಮಕ್ಕನವರ ಆರೋಗ್ಯ ವಿಚಾರಿಸಿದ ಸಚಿವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.