ಕರ್ನಾಟಕ

karnataka

ETV Bharat / state

ಸಿಎಂ ಪ್ರತ್ಯೇಕ ವಿಜಯನಗರ ಜಿಲ್ಲೆ ಮಾಡುವ ವಿಶ್ವಾಸವಿದೆ- ಸಚಿವ ಆನಂದ್ ಸಿಂಗ್ - Mining Company

ಬೆಂಗಳೂರಿನ ಶಕ್ತಿಭವನದ ಬಳಿ ಮಾತನಾಡಿದ ಅರಣ್ಯ ಸಚಿವ ಆನಂದ್ ಸಿಂಗ್​,ವಾಹನ ಇದೆ ಅಂದ್ಮೇಲೆ ನಿಯಮ ಉಲ್ಲಂಘನೆ ಕೇಸ್ ಇದ್ದೇ ಇರುತ್ತೆ. ಹಾಗೆಯೇ ನಮ್ಮದು ಗಣಿ ವ್ಯವಹಾರದ ಕುಟುಂಬ. ಗಣಿ ಕಂಪನಿ‌ ಮೇಲೆ ಅರಣ್ಯ ನಿಯಮ ಉಲ್ಲಂಘನೆ ಕೇಸ್ ಸಹಜ ಎಂದು ಹೇಳಿಕೆ ನೀಡಿದ್ದಾರೆ.

Minister Anand Singh
ಸಚಿವ ಆನಂದ್ ಸಿಂಗ್

By

Published : Feb 12, 2020, 11:11 PM IST

ಬೆಂಗಳೂರು:ವಾಹನ ಇದೆ ಅಂದ್ಮೇಲೆ ನಿಯಮ ಉಲ್ಲಂಘನೆ ಕೇಸ್ ಇದ್ದೇ ಇರುತ್ತೆ. ಅಂತೆಯೇ ಗಣಿ ಕಂಪನಿ‌ ಮೇಲೆ ಅರಣ್ಯ ನಿಯಮ ಉಲ್ಲಂಘನೆ ಕೇಸ್ ಸಹಜ ಎಂದು ಅರಣ್ಯ ಸಚಿವ ಆನಂದ್ ಸಿಂಗ್​ ಸಮರ್ಥನೆ ನೀಡಿದ್ದಾರೆ.

ನಗರದ ಶಕ್ತಿಭವನದ ಬಳಿ ಮಾತನಾಡಿದ ಅವರು, ಅರಣ್ಯ ನಿಯಮ ಉಲ್ಲಂಘನೆ ಸಂಬಂಧ ಪ್ರಕರಣಗಳು ದಾಖಲಾಗಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಈ ರೀತಿ ಹೇಳಿದ್ದಲ್ಲದೇ, ನಮ್ಮದು ಗಣಿ ವ್ಯವಹಾರದ ಕುಟುಂಬ. ಗಣಿ ಕಂಪನಿ‌ ಮೇಲೆ ಅರಣ್ಯ ನಿಯಮ ಉಲ್ಲಂಘನೆ ಕೇಸ್ ಸಹಜ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಚಿವ ಆನಂದ್ ಸಿಂಗ್

ಖಾತೆ ಬಗ್ಗೆ ಮಾತನಾಡಿದ ಅವರು, ಸಿಎಂಗೆ ಗೊತ್ತಿದೆ ಯಾರು ಯಾವ ಖಾತೆ ನಿಭಾಯಿಸ್ತಾರೆ ಅಂತಾ.. ನಾನು ಖಾತೆ ಬದಲಾವಣೆಗೆ ಬೇಡಿಕೆ ಇಟ್ಟಿರಲಿಲ್ಲ. ಇಂಥದ್ದೇ ಖಾತೆ ಬೇಕು ಅಂತಾನೂ ಕೇಳಿರಲಿಲ್ಲ. ಅರಣ್ಯ ಖಾತೆ‌ ನಿಭಾಯಿಸು ಅಂತಾ ಕೊಟ್ರು ‌ನಿಭಾಯಿಸ್ತೇನೆ. ನನಗೆ ಖಾತೆ ವಿಚಾರದಲ್ಲಿ ಅಸಮಾಧಾನ‌ ಇಲ್ಲ. ಸಂಪೂರ್ಣ ತೃಪ್ತಿ ಇದೆ ಎಂದರು.

ವಿಜಯನಗರ ಪ್ರತ್ಯೇಕ‌ ಜಿಲ್ಲೆ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ‌ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಬೇಡಿಕೆ ಕೈಬಿಟ್ಟಿಲ್ಲ. ಆದರೆ, ಈಗ ಬೇಡಿಕೆ ಬಗ್ಗೆ ಮಾತನಾಡುವ ಸಂದರ್ಭ ಅಲ್ಲ. ಸಮಯ ಬಂದಾಗ ಜಿಲ್ಲೆ ರಚನೆ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಯಾಗುವ ವಿಶ್ವಾಸ ನನಗೆ ಇದೆ ಎಂದು ಆನಂದ್ ಸಿಂಗ್ ಸ್ಪಷ್ಟಪಡಿಸಿದರು.

ಸಿಎಂ ಬಳ್ಳಾರಿಯನ್ನು ಎರಡು ಜಿಲ್ಲೆಗಳನ್ನಾಗಿ ಮಾಡೋದಿಲ್ಲ ಎಂದಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದೆ ಸಿಎಂ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡುವ ವಿಶ್ವಾಸ ಇದೆ. ಆದರೆ, ಯಾವಾಗ ನಿರ್ಧಾರ ಮಾಡ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.

ABOUT THE AUTHOR

...view details