ಕರ್ನಾಟಕ

karnataka

ETV Bharat / state

ಇದು ಜನಸಾಮಾನ್ಯರು ಮತ್ತು ದೂರದೃಷ್ಟಿವುಳ್ಳ ಬಜೆಟ್.. ಸಚಿವ ಆನಂದ್ ಸಿಂಗ್

ಇಂದು ಕೇಂದ್ರ ವಿತ್ತ ಸಚಿವೆ ಮಂಡಿಸಿದ ಕೇಂದ್ರ ಬಜೆಟ್​​ 2022-23 ಕುರಿತಂತೆ ಪ್ರವಾಸೋದ್ಯಮ ಸಚಿವ ಆನಂದ್​ ಸಿಂಗ್​ ಪ್ರತಿಕ್ರಿಯೆ ನೀಡಿದ್ದಾರೆ..

Minister Anand Singh Reaction About Union Budget 2022
ಬಜೆಟ್ ಕುರಿತು ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ

By

Published : Feb 1, 2022, 7:09 PM IST

ಬೆಂಗಳೂರು :ಕೋವಿಡ್ ಸಂಕಷ್ಟದ ನಡುವೆಯೂ ಆರ್ಥಿಕ ಸುಧಾರಣೆಗೆ ಒತ್ತು ಕೊಟ್ಟು ಆಯವ್ಯಯ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಕಾವೇರಿ-ಪೆನ್ನಾರ್, ಪೆನ್ನಾರ್-ಕೃಷ್ಣಾ, ಗೋದಾವರಿ-ಕೃಷ್ಣಾ ಸೇರಿದಂತೆ ಐದು ನದಿ ಜೋಡಣೆ ಬಗ್ಗೆ ಪ್ರಸ್ತಾಪ ಮಾಡಿರುವುದು ಸ್ವಾಗತಾರ್ಹ.

ರಸ್ತೆ, ಮೂಲಸೌಕರ್ಯ, 400 ನೂತನ ರೈಲು, ಮಹಿಳೆಯರ ಸಬಲೀಕರಣಕ್ಕೆ ಮಿಷನ್ ಶಕ್ತಿ ಜಾರಿ, ಗ್ರಾಮೀಣ ಪ್ರದೇಶಕ್ಕೂ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅತಿ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಿರುದ್ಯೋಗ, ಹಣದುಬ್ಬರ ಸಮಸ್ಯೆಗಳಿಗೆ ಹಲವಾರು ಕ್ರಮ.. ಇದು ಜನಸಾಮಾನ್ಯರ ಪರವಾದ ಬಜೆಟ್​ - ಸಚಿವೆ ಸೀತಾರಾಮನ್

ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಸ್ತೆ ಸಂಪರ್ಕ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟಾರೆ ಜನಸಾಮಾನ್ಯರ ಮತ್ತು ದೂರದೃಷ್ಟಿಯುಳ್ಳ ಬಜೆಟ್ ಆಗಿದೆ ಎಂದಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details