ಬೆಂಗಳೂರು: ವಿಜಯನಗರವನ್ನು ನೂತನ ಜಿಲ್ಲೆಯಾಗಿ ಮಾಡಲು ಬಳ್ಳಾರಿ ಜಿಲ್ಲೆ ವಿಭಜನೆಗೆ ಅಪಸ್ವರ ವ್ಯಕ್ತವಾದ ಹಿನ್ನಲೆ, ಸಚಿವ ಆನಂದ್ ಸಿಂಗ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿತು.
ಸಿಎಂ ಯಡಿಯೂರಪ್ಪ ಮೈಸೂರಿಗೆ ತೆರಳುವ ಮುನ್ನ ಸಚಿವ ಆನಂದ್ ಸಿಂಗ್, ಸಂಸದ ದೇವೇಂದ್ರಪ್ಪ ಭೇಟಿ ಮಾಡಿದರು. ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಕೆಲವರು ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಇಂದು ತುರ್ತಾಗಿ ಆನಂದ್ ಸಿಂಗ್, ಸಿಎಂ ಜೊತೆ ಮಾತುಕತೆ ನಡೆಸಿದರು. ನಿರ್ಧಾರ ಬದಲಿಸದಂತೆ ಮನವಿ ಮಾಡಿ ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡಲು ತಾತ್ವಿಕ ಒಪ್ಪಿಗೆ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.