ಬೆಂಗಳೂರು:ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರಕರಣದ ಅರೋಪಿಗಳಾದ ಜನಾರ್ದನ ರೆಡ್ಡಿ, ಆನಂದ್ ಸಿಂಗ್, ನಾಗೇಂದ್ರ, ಸತೀಶ್ ಸೈಲ್, ಆಲಿಖಾನ್ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಹಾಜರಾಗಿದ್ರು.
ಸಿಎಂ ನನ್ನ ಬೇಡಿಕೆಗೆ ಸ್ಪಂದಿಸಿದ್ರೆ ಮಾತ್ರ ಮುಂದಿನ ಮಾತುಕತೆ: ಆನಂದ್ ಸಿಂಗ್ - undefined
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದ ಆನಂದ್ ಸಿಂಗ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ನಾನು ಇಂದು ಯಾವುದೇ ಕಾಂಗ್ರೆಸ್ ನಾಯಕರ ಭೇಟಿ ಮಾಡಲ್ಲ ಎಂದು ತಿಳಿಸಿದ್ದಾರೆ.
ವಿಚಾರಣೆ ಮುಗಿದ ಬಳಿಕ ಹೊರಬಂದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ನಾನು ಇಂದು ಯಾವುದೇ ಕಾಂಗ್ರೆಸ್ ನಾಯಕರ ಭೇಟಿ ಮಾಡಲ್ಲ. ಈಗಾಗಲೇ ಎಲ್ಲಾ ನಾಯಕರ ಜೊತೆ ಫೋನ್ನಲ್ಲಿ ಮಾತನಾಡಿದ್ದೇನೆ. ಕೋರ್ಟ್ ಕೆಲಸ ಮುಗಿದಿದೆ, ನೇರವಾಗಿ ಹೊಸಪೇಟೆಗೆ ಹೋಗುತ್ತೆನೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ನನ್ನ ಬೇಡಿಕೆಗಳಿಗೆ ಸ್ಪಂದಿಸಿದ್ರೆ ಮುಂದಿನ ಮಾತುಕತೆ. ನನ್ನ ಜೊತೆ ನೇರ ಮಾತುಕತೆಗೆ ಸ್ಪಂದಿಸುವ ವ್ಯಕ್ತಿ ಅಮೆರಿಕದಲ್ಲಿ ಇದ್ದಾರೆ .ಅವ್ರು ಬಂದ ಮೇಲೆ ಮಾತಾಡ್ತೀನಿ. ನನ್ನ ಡಿಮ್ಯಾಂಡ್ ಈಡೇರಿಸಿದ್ರೆ ಮಾತ್ರ ಮುಂದಿನ ಮಾತು. ಅಲ್ಲಿವರೆಗೂ ಯಾರ ಬಳಿ ಮಾತುಕತೆ ಇಲ್ಲ ಎಂದು ನ್ಯಾಯಲಯದಿಂದ ಹೊರಟರು.