ಕರ್ನಾಟಕ

karnataka

ETV Bharat / state

ಶಾಸಕ ಜಮೀರ್​ ಮನೆಗೆ ಹಾಲು ಹಾಕಲು ಬಂದಾತ ಇಡಿ ದಾಳಿಯಿಂದ ಲಾಕ್​! - ಚಾಮರಾಜಪೇಟೆ ಕ್ಷೇತ್ರ

ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲೆ ಇಡಿ ದಾಳಿ ನಡೆಸಿದ್ದು, ಈ ವೇಳೆ ಮನೆಗೆ ಹಾಲು ಹಾಕಲು ಬಂದಿದ್ದ ವ್ಯಕ್ತಿಯೂ ಮನೆಯಲ್ಲಿ ಲಾಕ್​ ಆಗಿರುವ ಘಟನೆ ನಡೆದಿದೆ.

house of Jameer
ಜಮೀರ್​ ಮನೆ

By

Published : Aug 5, 2021, 1:50 PM IST

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ಐಷಾರಾಮಿ ಬಂಗಲೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಗೆ ಹಾಲು ಹಾಕಲು ಬಂದಿದ್ದ ವ್ಯಕ್ತಿಯೂ ಮನೆಯಲ್ಲಿ ಲಾಕ್​ ಆಗಿರುವ ಘಟನೆ ನಡೆದಿದೆ.

ಇಡಿ ದಾಳಿಗೂ ಮುನ್ನ ಜಮೀರ್ ನಿವಾಸಕ್ಕೆ ಟಿವಿಎಸ್ ಬೈಕ್​ನಲ್ಲಿ ವ್ಯಕ್ತಿಯೋರ್ವ ಹಾಲು ಹಾಕಲು ಬಂದಿದ್ದಾನೆ. ಈ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯನ್ನು ಸಂಪೂರ್ಣ ಲಾಕ್​ ಮಾಡಿದ್ದಾರೆ.

ಜಮೀರ್ ಅಹಮದ್​ ನಗರದ ಹಲವೆಡೆ ಆಸ್ತಿ ಹೊಂದಿದ್ದಾರೆ ಎನ್ನಲಾಗ್ತಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ನಾಲ್ಕು ತಂಡಗಳು ಈ ದಾಳಿ ನಡೆಸಿ, ಶೋಧ ಕಾರ್ಯದಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ.

ABOUT THE AUTHOR

...view details