ಬೆಂಗಳೂರು:ಈಗಾಗಲೇ ಸರ್ಕಾರ ರಾಜ್ಯದ ವಲಸೆ ಕಾರ್ಮಿಕರನ್ನು ತಮ್ಮ ಗ್ರಾಮಗಳಿಗೆ ಹೋಗಲು ಅನುವು ಮಾಡಿಕೊಟ್ಟಿದೆ. ತಮ್ಮ ಊರುಗಳಿಗೆ ಹೋಗಲು ಇಚ್ಛಿಸುವ ಕಾರ್ಮಿಕರನ್ನು ತಪಾಸಣೆ ಮಾಡಿ ಅವರ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತಿದೆ. ರಾಜ್ಯದ ಒಟ್ಟು ವಲಸೆ ಕಾರ್ಮಿಕರು ಮತ್ತು ಹೊರ ರಾಜ್ಯದ ವಲಸೆ ಕಾರ್ಮಿಕರು ಎಲ್ಲಿ ಎಷ್ಟಿದ್ದಾರೆ ಎಂಬ ಸಮಗ್ರ ವರದಿ ಇಲ್ಲಿದೆ.
ಲಾಕ್ಡೌನ್ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವುದು ವಲಸೆ ಕಾರ್ಮಿಕರು. ಸರ್ಕಾರ ಅವರ ಹಿತರಕ್ಷಣೆಗಾಗಿ ಹಲವು ಕಾರ್ಯಯೋಜನೆ ರೂಪಿಸಿದೆ. ಇದೀಗ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಅವರನ್ನೂ ತಪಾಸಣೆ ಮಾಡಿ ರಾಜ್ಯ ಸರ್ಕಾರ ನಮ್ಮ ರಾಜ್ಯದ ವಲಸೆ ಕಾರ್ಮಿಕರಿಗೆ ರಾಜ್ಯದೊಳಗೆ ತಮ್ಮ ಗ್ರಾಮಗಳಿಗೆ ಹೋಗಲು ಅನುಮತಿ ನೀಡುತ್ತಿದೆ. ಇದರಂತೆ ಹಲವು ಜಿಲ್ಲೆಗಳಲ್ಲಿನ ರಾಜ್ಯದ ವಲಸೆ ಕಾರ್ಮಿಕರು ಜಿಲ್ಲಾಧಿಕಾರಿಗಳ ಅನುಮತಿ ಪಡೆದು, ಮಾರ್ಗಸೂಚಿಯನ್ವಯ ಅವರ ಗ್ರಾಮಗಳಿಗೆ ಬಸ್ಗಳ ಮೂಲಕ ಕಳುಹಿಸಿಕೊಡಲಾಗುತ್ತಿದೆ.
ಎಲ್ಲಿ ಎಷ್ಟು ರಾಜ್ಯದ ವಲಸೆ ಕಾರ್ಮಿಕರು?:
ಈವರೆಗಿನ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ನಾನಾ ಜಿಲ್ಲೆಗಳಲ್ಲಿರುವ ರಾಜ್ಯದ ವಲಸೆ ಕಾರ್ಮಿಕರು ಸುಮಾರು 5,382 ಮಂದಿ. ಈ ಪೈಕಿ 2,762 ಕಾರ್ಮಿಕರು ಬೆಂಗಳೂರಿನಲ್ಲಿದ್ದರೆ, ಮೈಸೂರಿನಲ್ಲಿ 2,000, ಮಂಗಳೂರು 224 ಹಾಗೂ 99 ಕಾರ್ಮಿಕರು ಬೆಂ.ಗ್ರಾಮಾಂತರದಲ್ಲಿ ಇದ್ದಾರೆ.
ಇನ್ನು ಭಟ್ಕಳದಲ್ಲಿ 40 ಮಂದಿ, ಬೆಳಗಾವಿಯಲ್ಲಿ 41, ಬಳ್ಳಾರಿ 14, ವಿಜಯಪುರ 14, ಚಾಮರಾಜನಗರ 35, ಚಿಕ್ಕಬಳ್ಳಾಪುರ 20, ಧಾರವಾಡ 21, ರಾಯಚೂರು 22, ರಾಮನಗರ 8, ಶಿವಮೊಗ್ಗ 21, ತುಮಕೂರು 32, ಯಾದಗಿರಿ 8 ಮಂದಿ ರಾಜ್ಯದ ಕಾರ್ಮಿಕರನ್ನು ಗುರುತಿಸಲಾಗಿದೆ.
ಬಸ್ ಮೂಲಕ ಸ್ಥಳಾಂತರ: