ಬೆಂಗಳೂರು: ಕ್ವಾರಂಟೈನ್ ಅವಧಿ ಮುಗಿದಿದ್ದರೂ ನಗರದ ಹೊಂಗಸಂದ್ರ ವಾರ್ಡ್ನಲ್ಲಿರವ ಮನೆಗೆ ಹೋಗಲು ಆಗುತ್ತಿಲ್ಲ. ಹೀಗಾಗಿ ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ವಲಸೆ ಕಾರ್ಮಿಕರು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಕ್ವಾರಂಟೈನ್ ಅವಧಿ ಮುಗಿದರೂ ಹೊಂಗಸಂದ್ರದಲ್ಲಿನ ಮನೆಗೆ ಹೋಗಲಾಗುತ್ತಿಲ್ಲ... ವಲಸೆ ಕಾರ್ಮಿಕರ ಅಳಲು - ಕ್ವಾರಂಟೈನ್
ಕ್ವಾರಂಟೈನ್ ಅವಧಿ ಮುಗಿದಿದ್ದರೂ ಹೊಂಗಸಂದ್ರದಲ್ಲಿರುವ ಮನೆಗೆ ಹೋಗಲು ಆಗುತ್ತಿಲ್ಲ. ಹೀಗಾಗಿ ಊರಿಗೆ ಕಳುಹಿಸಿಕೊಡಿ ಎಂದು ವಲಸೆ ಕಾರ್ಮಿಕರು ಹೇಳಿದ್ದಾರೆ.
quarantine
19 ವಲಸೆ ಕಾರ್ಮಿಕರನ್ನು ರೈಲಿನ ಮೂಲಕ ತಮ್ಮ ಸ್ವಂತ ಊರುಗಳಿಗೆ ಕಳಿಸಲಾಗಿದೆ. ಉತ್ತರ ಪ್ರದೇಶಕ್ಕೆ ಮಾತ್ರ ಟಿಕೆಟ್ ಲಭ್ಯವಿತ್ತು. ಇನ್ನು ತಮಿಳುನಾಡು, ಛತ್ತಿಸ್ಘಡ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಕೇಂದ್ರದಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ಸುರೇಶ್ ಮಾಹಿತಿ ನೀಡಿದರು.
ಪಾದರಾಯನಪುರದಲ್ಲಿ 16 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಜಗಜೀವನ್ ರಾಮ್ ಆಸ್ಪತ್ರೆ, ಕಿಯೋಸ್ಕ್ ಹಾಗೂ ಬಿಎಂಟಿಸಿ ಬಸ್ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲಾಯಿತು ಎಂದು ಹೇಳಿದರು.