ಬೆಂಗಳೂರು : ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾದ್ರೂ ಕೆಲ ಏರಿಯಾಗಳಲ್ಲಿ ಜನರು ಇನ್ನೂ ಆತಂಕದಲ್ಲಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಸಕ್ರಿಯವಾಗಿರುವ ಮೈಕ್ರೋ ಕಂಟೋನ್ಮೆಂಟ್ ಝೋನ್ ಸಂಖ್ಯೆ ಹೆಚ್ಚಾಳವಾಗ್ತಿವೆ.
ಸಿಲಿಕಾನ್ ಸಿಟಿಯಲ್ಲಿ ಸೋಂಕು ಕಡಿಮೆ.. ಡೇಂಜರ್ ಝೋನ್ನಲ್ಲಿವೆ ಹೊರವಲಯಗಳು..
ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡೆಮೆಯಾಗುತ್ತಿವೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 47 ಮೈಕ್ರೋ ಕಂಟೈನ್ಮೆಂಟ್ ಝೋನ್ಗಳು ಸಕ್ರಿಯವಾಗಿವೆ. 2 ಝೋನ್‌ಗಳಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿವೆ..
BBMP
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 47 ಮೈಕ್ರೋ ಕಂಟೈನ್ಮೆಂಟ್ ಝೋನ್ಗಳು ಸಕ್ರಿಯವಾಗಿವೆ. 2 ಝೋನ್‌ಗಳಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿವೆ. ಡೇಂಜರ್ ಸ್ಥಿತಿಯಲ್ಲಿ ನಗರದ ಹೊರ ವಲಯಗಳಿದ್ದು, ದಿನೇದಿನೆ ಈ ಎರಡು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ಗಳು ಏರಿಕೆಯಾಗುತ್ತಿವೆ.
ಮಹಾದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ತಲಾ 12 ಕಂಟೈನ್ಮೆಂಟ್ ಝೋನ್‌ಗಳಿವೆ. ಈ ವಲಯಗಳಲ್ಲಿ ಎಷ್ಟೆಷ್ಟು ಮೈಕ್ರೋ ಕಂಟೋನ್ಮೆಂಟ್ ಝೋನ್ ಇವೆ ಎಂಬುದನ್ನು ಬಿಬಿಎಂಪಿ ಪಟ್ಟಿ ಮಾಡಿದೆ.
- ಮಹಾದೇವಪುರ - 12
- ಯಲಹಂಕ - 6
- ಬೊಮ್ಮನಹಳ್ಳಿ-12
- ದಕ್ಷಿಣ ವಲಯ- 1
- ಪೂರ್ವ ವಲಯ - 7
- ರಾಜರಾಜೇಶ್ವರಿನಗರ- 0
- ಪಶ್ಚಿಮ ವಲಯ - 4
- ದಾಸರಹಳ್ಳಿ - 6