ಕರ್ನಾಟಕ

karnataka

ಬದುಕು ಕಟ್ಟಿಕೊಡುತ್ತಿದೆ ನರೇಗಾ ಯೋಜನೆ: ಪ್ರಸಕ್ತ ವರ್ಷದಲ್ಲಿ ಉತ್ತಮ ಸಾಧನೆ

By

Published : Nov 13, 2020, 5:04 PM IST

ಪ್ರಸಕ್ತ ವರ್ಷದಲ್ಲಿ 8.34 ಲಕ್ಷ ಕಾಮಗಾರಿಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರಗತಿಯಲ್ಲಿವೆ. ಈ ಮೂಲಕ ಲಕ್ಷಾಂತರ ಕಾರ್ಮಿಕರ ಹೊಟ್ಟೆ ತುಂಬಿಸುವ ಮಾರ್ಗವಾಗಿ ನರೇಗಾ ಯೋಜನೆ ಮಾರ್ಪಟ್ಟಿದೆ.

Minister for Rural Development and Panchayat Raj Ishwarappa
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ

ಬೆಂಗಳೂರು:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಾಜ್ಯ ಸರ್ಕಾರ 2020-21ನೇ ಸಾಲಿನಲ್ಲಿ ಶೇ. 71.68ರಷ್ಟು ಸಾಧನೆ ಮಾಡಿದೆ. ಇದುವರೆಗೂ 9.32 ಕೋಟಿ ರೂ. ಮಾನವ ದಿನ ಸೃಜಿಸಲಾಗಿದೆ. 13 ಕೋಟಿ ಮಾನವ ದಿನ ಗುರಿ ಹೊಂದಲಾಗಿತ್ತು. ನರೇಗಾ ಯೋಜನೆಯಡಿ ಈ ವರ್ಷ 44.86 ಲಕ್ಷ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದ್ದು, ಕಳೆದ ಐದು ವರ್ಷಗಳಲ್ಲಿ ಇದು ಅತಿ ಹೆಚ್ಚಿನ ಸಾಧನೆಯಾಗಿದೆ.

ಪ್ರಸಕ್ತ ವರ್ಷದಲ್ಲಿ 8.3 ಲಕ್ಷ ಕಾಮಗಾರಿಗಳು ಪ್ರಗತಿಯಲ್ಲಿವೆ. ಎಸ್​​ಸಿ, ಎಸ್​ಟಿ ಮತ್ತು ಮಹಿಳೆಯರು ಕೂಡ ಈ ಯೋಜನೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದು ಕಳೆದ 5 ವರ್ಷಗಳ ದಾಖಲೆಯಾಗಿದೆ‌. ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಕಂದಕ, ಬದು ನಿರ್ಮಾಣ, ಕೃಷಿ ಹೊಂಡ, ದನದ ಕೊಟ್ಟಿಗೆ, ಬಚ್ಚಲು ಗುಂಡಿ, ರಸ್ತೆ ಬದಿ ನೀರು, ಬ್ಲಾಕ್ ಪ್ಲಾಂಟೇಷನ್ ಕಾಮಗಾರಿ ಕೈಗೊಳ್ಳಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ

ಅಂತರ್ಜಲ ಚೇತನ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಶೇ. 65ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿ, ಶೇ. 60ರಷ್ಟು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಕಡ್ಡಾಯಗೊಳಿಸಿದೆ.

ಪ್ರಸಕ್ತ ಸಾಲಿನಲ್ಲಿ ಕೂಲಿಗಾಗಿ 2,493.18 ಕೋಟಿ ರೂ. ಮತ್ತು ಸಾಮಗ್ರಿಗಳಿಗಾಗಿ 609.65 ಕೋಟಿ ರೂ. ಸೇರಿ ಒಟ್ಟು 3,155.03 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ವರ್ಷದಲ್ಲಿ 44.86 ಲಕ್ಷ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲಾಗಿದ್ದು, ಇದು ಕಳೆದ 5 ವರ್ಷಗಳಲ್ಲಿ ಅತಿ ಹೆಚ್ಚಿನ ಸಾಧನೆಯಾಗಿದೆ.

ಪ್ರಸಕ್ತ ವರ್ಷದಲ್ಲಿ 8.34 ಲಕ್ಷ ಕಾಮಗಾರಿಗಳು ಪ್ರಗತಿಯಲ್ಲಿವೆ. ಮೇ-ಜೂನ್ ತಿಂಗಳಲ್ಲಿ ಕಂದಕ, ಬದು ಅಭಿಯಾನ ಮತ್ತು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಬಚ್ಚಲು ಗುಂಡಿ ಮತ್ತು ಪೌಷ್ಟಿಕ ತೋಟ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣವು ಕಳೆದ 5 ವರ್ಷಗಳಲ್ಲಿ ಅತಿ ಹೆಚ್ಚು ಪ್ರಸ್ತುತ ವರ್ಷದಲ್ಲಿ ದಾಖಲಾಗಿದೆ.

ಅಂತರ್ಜಲ ಚೇತನ ಕಾರ್ಯಕ್ರಮ

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರ ಯೋಜನೆಯಡಿ ಶೇ. 65ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಹಾಗೂ ಶೇ. 60ರಷ್ಟು ಆರ್ಥಿಕ ವೆಚ್ಚವನ್ನು ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವಿನಿಯೋಗಿಸಲಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಸಂಬಂಧಿಸಿದ ಲೋಕೋಪಯೋಗಿ ಕಾಮಗಾರಿಗಳಡಿಯಲ್ಲಿ 'ಅಂತರ್ಜಲ ಚೇತನ ' ಜಲಾನಯನ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು.

ಅಂತರ್ಜಲ ಚೇತನ ಕಾರ್ಯಕ್ರಮದ ಉದ್ದೇಶಗಳೇನು

ನರೇಗಾ ಯೋಜನೆಯಡಿ ಎಲ್ಲಾ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಯೋಜನೆ ತಯಾರಿಸುವಲ್ಲಿ ಜಲಾನಯನ ಆಧಾರಿತ ಮಾದರಿ ಅಳವಡಿಸಿಕೊಳ್ಳಲಾಗುತ್ತದೆ.
ಅಂತರ್ಜಲ ಚೇತನ ಯೋಜನೆಯಲ್ಲಿ ಜನರ ಸಹಭಾಗಿತ್ವದ ಮೂಲಕ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನು ರೂಪಿಸಲಾಗುತ್ತದೆ. ಅರಣ್ಯೀಕರಣ, ಕೃಷಿ ಅರಣ್ಯ ಮತ್ತು ತೋಟಗಾರಿಕೆ ಮೂಲಕ ಹಸಿರು ಹೊದಿಕೆ ಪ್ರದೇಶವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಸಾಗುವಳಿ ಪ್ರದೇಶದಲ್ಲಿ ಮಣ್ಣಿನ ತೇವಾಂಶ ಹೆಚ್ಚಿಸಿ, ಸವಕಳಿಯನ್ನು ನಿಯಂತ್ರಿಸುವ ಮೂಲಕ ಫಲವತ್ತತೆಯನ್ನು ಹೆಚ್ಚಿಸುವುದು. ಕೃಷಿ ಹೊಂಡ, ಬದು ನಿರ್ಮಾಣ, ಚೆಕ್ ಡ್ಯಾಂ, ಬೋಲ್ಡರ್‌ ಚೆಕ್, ಗಲ್ಲಿ ಪ್ಲಗ್ , ತೆರೆದ ಬಾವಿ ಮತ್ತಿತರ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಅಕ್ಟೋಬರ್ 2ರಿಂದಲೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅರ್ಹ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಬೇಡಿಕೆ ಪಡೆಯುವ ಸಲುವಾಗಿ ರೈತರ ಕ್ರಿಯಾ ಯೋಜನೆ ಅಭಿಯಾನ ಆರಂಭಿಸಲಾಗಿದೆ.

ಒಟ್ಟು ಶೇ. 81.93 ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಿಗೆ ಹಾಗೂ ಶೇ. 78.43ರಷ್ಟು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವೆಚ್ಚ ಮಾಡಲಾಗಿದೆ. ನರೇಗಾ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದೆ ಎನ್ನುತ್ತಾರೆ ಸಚಿವರು.

ಪ್ರಮುಖ ಕಾಮಗಾರಿಗಳು ಹಾಗೂ ಅದರ ಭೌತಿಕ ಪ್ರಗತಿ ಎಷ್ಟು?

ಕಂದಕ, ಬದು ನಿರ್ಮಾಣ: 1,18,113ರಷ್ಟು ಭೌತಿಕ ಪ್ರಗತಿ
ಕೃಷಿ ಹೊಂಡ: 67,405
ದನದ ಕೊಟ್ಟಿಗೆ: 62,405
ಬಚ್ಚಲು ಗುಂಡಿ ( Soak Pit): 68,912
ರಸ್ತೆಬದಿ ನೆಡುತೋಪು: 1945 ಕಿ.ಮೀ
ಬ್ಲಾಕ್ ಪ್ಲಾಂಟೇಷನ್: 948 ಹೆಕ್ಟೇರ್

ABOUT THE AUTHOR

...view details