ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಮಾರ್ಗದ ಸಂಚಾರದಲ್ಲಿ ಭಾನುವಾರ ವ್ಯತ್ಯಯವಾಗಲಿದೆ. ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲುಗಳ ಸೇವೆಯಲ್ಲಿ ಎರಡು ಗಂಟೆ ವಿಳಂಬವಾಗಲಿದೆ. ಈ ಎರಡು ನಿಲ್ದಾಣಗಳ ನಡುವಿನ ರೈಲು ಸೇವೆ ನಾಳೆ ಬೆಳಗ್ಗೆ 7 ಗಂಟೆಯ ಬದಲಾಗಿ 9 ಗಂಟೆಗೆ ಆರಂಭವಾಗಲಿದೆ.
ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಎಂ. ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ಸೇವೆ ಎರಡು ಗಂಟೆ ತಡವಾಗಿ ಲಭ್ಯವಾಗಲಿದೆ. ಭಾನುವಾರ ಬೆ. 7 ಗಂಟೆಯಿಂದ ಮೆಟ್ರೋ ಸೇವೆ ಸಿಗುತ್ತಿತ್ತು. ಆದ್ರೆ ಕಾಮಗಾರಿಯಿಂದಾಗಿ ಬೆ. 9 ಗಂಟೆಯಿಂದ ಸೇವೆ ಆರಂಭವಾಗಲಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಮೆಟ್ರೋ ನೇರಳೆ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಎಂ ಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ಮಧ್ಯೆ ಬೆಳಗ್ಗೆ ಎರಡು ಗಂಟೆ ವಿಳಂಬವಾಗಿ ಮೆಟ್ರೋ ಸೇವೆ ಪ್ರಾರಂಭವಾಗಲಿದೆ. ಬೆಳಗ್ಗೆ 9 ಗಂಟೆಯ ಬಳಿಕ ರೈಲುಗಳು ಎಂದಿನಂತೆ ಸಂಚರಿಸಲಿವೆ. ಚಲ್ಲಘಟ್ಟ ಮತ್ತು ಎಂ. ಜಿ. ರಸ್ತೆ ಮತ್ತು ವೈಟ್‌ಫೀಲ್ಡ್ ನಾಗಸಂದ್ರ ಮತ್ತು ರೇಷ್ಮೇ ಸಂಸ್ಥೆ ನಡುವಿನ ಮಾರ್ಗದಲ್ಲಿ ಎಂದಿನಂತೆ ರೈಲುಗಳ ಸಂಚಾರ ವೇಳಾಪಟ್ಟಿಯಂತೆ ಇರಲಿದೆ ಎಂದು ತಿಳಿಸಿದೆ.