ಕರ್ನಾಟಕ

karnataka

ETV Bharat / state

ಸಿಎಂ ಬಿಎಸ್‌ವೈ ನಿವಾಸಕ್ಕೆ ಮೇಯರ್ ಗಂಗಾಂಬಿಕೆ ಭೇಟಿ... - ಕ್ಯಾಬಿನೆಟ್ ಸಭೆ

ಹಣವಿಲ್ಲದೇ ಪಾಲಿಕೆ ಸಂಕಷ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್​ಗೆ ಅನುಮೋದನೆ ನೀಡುವಂತೆ ಸಿಎಂಗೆ ಮೇಯರ್​ ಗಂಗಾಬಿಕೆ ಮನವಿ ಸಲ್ಲಿಕೆ ಮಾಡಿದ್ದಾರೆ.

ಮೇಯರ್​ ಗಂಗಾಬಿಕೆ

By

Published : Aug 14, 2019, 10:46 AM IST

ಬೆಂಗಳೂರು :ಹಣವಿಲ್ಲದೇ ಪಾಲಿಕೆ ಸಂಕಷ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಮೇಯರ್ ಗಂಗಾಂಬಿಕೆ ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ಯಡಿಯೂರಪ್ಪರನ್ನ ಭೇಟಿ ಮಾಡಲು ಬಂದಿದ್ದರು. ಬಜೆಟ್‌ಗೆ ತಡೆ ನೀಡಿರುವ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯ ದಿನಾಚರಣೆಗೂ ದುಡ್ಡಿಲ್ಲ ಎಂದು ಸಿಎಂಗೆ ಮೇಯರ್ ಮೂಲಕ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ಪತ್ರ ಬರೆದಿದ್ದರು.

ಬಿಎಸ್‌ವೈ ನಿವಾಸಕ್ಕೆ ಭೇಟಿ ನೀಡಿದ ಮೇಯರ್ ಗಂಗಾಂಬಿಕೆ

ಇನ್ನು ಇಂದು ಕ್ಯಾಬಿನೆಟ್ ಸಭೆ ಇದ್ದು, ಹಾಗಾಗಿ ಬಿಬಿಎಂಪಿ ಬಜೆಟ್‌ಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದೇನೆ. ಪರಿಶೀಲನೆ ಮಾಡ್ತೇನೆಂದು ಸಿಎಂ ಹೇಳಿದ್ದಾರೆಂದು ತಿಳಿಸಿದ್ದಾರೆ.

ಇಂದು ಪರಿಹಾರ ಪ್ಯಾಕೇಜ್ ಘೋಷಣೆ ಸಾಧ್ಯತೆ : ಇನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ ಇದ್ದು, ಬಿಎಸ್​ವೈ ಸಿಎಂ ಆದ ಬಳಿಕ ಮೂರನೇ ಸಭೆ ಇದಾಗಿದೆ. ಸಭೆಯಲ್ಲಿ ಪರಿಹಾರದ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

ABOUT THE AUTHOR

...view details