ಕರ್ನಾಟಕ

karnataka

ETV Bharat / state

ಮೆಟ್ರೋ 2ನೇ ಹಂತದ 900ಮೀ ಸುರಂಗ ಕಾರ್ಯ ಪೂರ್ಣಗೊಳಿಸಿದ ಉರ್ಜಾ ಟಿಬಿಎಂ

ಸುಮಾರು 6 ತಿಂಗಳ ನಂತರ ಶುಕ್ರವಾರ ಮೆಟ್ರೋ 2ನೇ ಹಂತದ 900 ಮೀಟರ್ ಸುರಂಗ ಕೊರೆದು ಉರ್ಜಾ ಟಿಬಿಎಂ ಹೊರ ಬಂದಿದೆ.

Etv Bharatmetro-urja-tbm-successfully-come-out-after-completion-of-work
Etv Bharatಮೆಟ್ರೋ 2ನೇ ಹಂತದ 900ಮೀ ಸುರಂಗ ಕಾರ್ಯ ಪೂರ್ಣಗೊಳಿಸಿದ ಉರ್ಜಾ ಟಿಬಿಎಂ

By

Published : Jul 1, 2022, 8:08 AM IST

Updated : Jul 1, 2022, 8:19 AM IST

ಬೆಂಗಳೂರು:2021ರ ಡಿಸೆಂಬರ್ 22ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆಗೆ ಸುರಂಗ ಮಾರ್ಗವನ್ನು ಪ್ರಾರಂಭಿಸಿರುವ ಉರ್ಜಾ ಟಿಬಿಎಂ 900 ಮೀ. ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ. ಸುಮಾರು 6 ತಿಂಗಳ ನಂತರ ಶುಕ್ರವಾರ 900 ಮೀಟರ್ ಸುರಂಗ ಕೊರೆದು ಉರ್ಜಾ ಟಿಬಿಎಂ ಹೊರ ಬಂದಿದೆ.

ಮೆಟ್ರೋ 2ನೇ ಹಂತದ 900ಮೀ ಸುರಂಗ ಕಾರ್ಯ ಪೂರ್ಣಗೊಳಿಸಿದ ಉರ್ಜಾ ಟಿಬಿಎಂ

2021ರ ಡಿಸೆಂಬರ್ 22ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಆರಂಭಿಸಿ, ಪಾಟರಿ ಟೌನ್ ನಿಲ್ದಾಣದ ಕಡೆ ಸುರಂಗ ಪ್ರವೇಶಿಸಿತ್ತು. ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಸುರಂಗ ಮಾರ್ಗ ಇದಾಗಿದೆ. ಶಿವಾಜಿನಗರದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಸ್ಟೇಷನ್ ಬಳಿ ಬ್ರೇಕ್ ಥ್ರೂ ಆಗಿತ್ತು. ಮೊದಲ ಊರ್ಜಾ ಬ್ರೇಕ್ ಥ್ರೂ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ವೀಕ್ಷಿಸಿದ್ದರು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ

ಇದನ್ನೂ ಓದಿ:ಇಂದಿನಿಂದ ಮಹಾನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ; ನಿಯಮ ಮೀರಿದರೆ ದಂಡವೆಷ್ಟು ಗೊತ್ತಾ?!

Last Updated : Jul 1, 2022, 8:19 AM IST

ABOUT THE AUTHOR

...view details