ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಮೆಟ್ರೋ ಸಂಚಾರ ಆರಂಭ: ಸಿಎಂ ಬಿಎಸ್​ವೈ ಸುಳಿವು - ಕೇಂದ್ರ ಸರ್ಕಾರ

ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಆದಷ್ಟು ಬೇಗ ಆರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

Metro services in Bengaluru
Metro services in Bengaluru

By

Published : Aug 27, 2020, 5:31 PM IST

ಬೆಂಗಳೂರು:ದೇಶಾದ್ಯಂತ ಮುಂದಿನ ತಿಂಗಳ 1ರಿಂದ ಅನ್​ಲಾಕ್​ 4.0 ಜಾರಿಗೊಳ್ಳಲಿದ್ದು, ಈ ವೇಳೆ ಮೆಟ್ರೋ ಸಂಚಾರ ಆರಂಭಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದೀಗ ಇದೇ ವಿಷಯವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಮಾತನಾಡಿದ್ದು, ಆದಷ್ಟು ಬೇಗ ಮೆಟ್ರೋ ಸಂಚಾರ ಆರಂಭ ಮಾಡುವುದಾಗಿ ಸುಳಿವು ನೀಡಿದ್ದಾರೆ.

ಅನ್​ಲಾಕ್​ 4.0: ಮತ್ತಷ್ಟು ಸಡಿಲಿಕೆ, ಮೆಟ್ರೋ ಸಂಚಾರಕ್ಕೆ ಗ್ರೀನ್​ ಸಿಗ್ನಲ್​!?

ಮೆಟ್ರೋ ಸೇವೆ ಆರಂಭಿಸಲು ಅಗತ್ಯವಾದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಸಂಚಾರ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಜನಜೀವನ ಸರಿದಾರಿಗೆ ಬರುತ್ತಿದೆ ಎಂದಿರುವ ಅವರು, ಐದು ತಿಂಗಳ ಬಳಿಕ ಮೆಟ್ರೋ ಸೇವೆ ಆರಂಭ ಮಾಡುವ ಸುಳಿವು ನೀಡಿದ್ದಾರೆ.

ಬಿ.ಎಸ್​​ ಯಡಿಯೂರಪ್ಪ: ಮುಖ್ಯಮಂತ್ರಿ

ಒಂದು ಮೆಟ್ರೋ ರೈಲಿನಲ್ಲಿ 340 ಪ್ರಯಾಣಿಕರು ಮಾತ್ರ ತೆರಳಲು ಅವಕಾಶ ನೀಡುವ ಸಾಧ್ಯತೆ ಇದ್ದು, ಒಂದು ಬೋಗಿಯಲ್ಲಿ 50 ಪ್ರಯಾಣಿಕರು ಕುಳಿತುಕೊಳ್ಳಲು ಅನುಮತಿ ನೀಡಲಾಗುವುದು ಎಂದು ತಿಳಿದು ಬಂದಿದೆ. ಇದರ ಜತೆಗೆ ಥರ್ಮಲ್​ ಸ್ಕ್ರೀನಿಂಗ್​ ಮಾಡಲು ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮೆಟ್ರೋ ಸಂಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಎಲ್ಲ ರಾಜ್ಯದ ಅಭಿಪ್ರಾಯ ಕೇಳಿದ್ದು, ಈಗಾಗಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಆದಷ್ಟು ಬೇಗ ಮೆಟ್ರೋ ಸೇವೆ ಆರಂಭ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details