ಕರ್ನಾಟಕ

karnataka

By

Published : Jun 4, 2022, 10:38 PM IST

ETV Bharat / state

ನಾಗರಿಕ ಸೇವೆ ಪೂರ್ವಭಾವಿ ಪರೀಕ್ಷೆ: ನಾಳೆ ಮೆಟ್ರೋ ಸೇವೆ ಬೆಳಗ್ಗೆ 6 ಗಂಟೆಗೆ ಶುರು

ಯುಪಿಎಸ್​ಸಿ ಪ್ರಿಲಿಮಿನರಿ ಪರೀಕ್ಷೆ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6 ಗಂಟೆಗೆ ಬೆಂಗಳೂರು ಮೆಟ್ರೋ ಸೇವೆ ಪ್ರಾರಂಭವಾಗಲಿದೆ..

metro-service-to-help-upsc-preliminary-exams
ನಾಗರಿಕ ಸೇವೆ ಪೂರ್ವಭಾವಿ ಪರೀಕ್ಷೆ: ನಾಳೆ ಮೆಟ್ರೋ ಸೇವೆ ಬೆಳಗ್ಗೆ 6 ಗಂಟೆಗೆ ಶುರು

ಬೆಂಗಳೂರು :ನಾಳೆ (ಭಾನುವಾರ) ಯುಪಿಎಸ್​ಸಿ ಪೂರ್ವಭಾವಿ ಪರೀಕ್ಷೆ-2022 (UPSC Preliminary Exams-2022) ನಡೆಯುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 6 ಗಂಟೆಯಿಂದ ಆರಂಭವಾಗಲಿದೆ.

ಈ ಸಂಬಂಧ ಬಿಎಂಆರ್​​ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಮೆಟ್ರೋ ಸೇವೆ ಎರಡೂ ಮಾರ್ಗಗಳಲ್ಲಿ ಬೆಳಗ್ಗೆ 7 ಗಂಟೆಗೆ ಬದಲಾಗಿ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸುಗಮವಾಗಿ ತಲುಪಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ಪಠ್ಯ ಪರಿಷ್ಕರಣೆ ದಲಿತ, ಮಹಿಳಾ, ಸಾಮಾಜಿಕ ನ್ಯಾಯ, ಸಮಾನತೆ ವಿರೋಧಿ ಕ್ರಮ: ಬರಗೂರು

ABOUT THE AUTHOR

...view details