ಕರ್ನಾಟಕ

karnataka

ETV Bharat / state

ಗೊರಗುಂಟೆ ಪಾಳ್ಯ ಮೆಟ್ರೋ ಸ್ಟೇಷನ್ ಸಿಬ್ಬಂದಿಗೆ ಪ್ರಯಾಣಿಕರ ತರಾಟೆ - Metro news

ಬೆಂಗಳೂರು ಗೊರಗುಂಟೆ ಪಾಳ್ಯ ‌ಮೆಟ್ರೋ ಸ್ಟೇಷನ್‌ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್ ಗರಂ ಆಗಿದ್ದರು.

Metro Passengers Angry
ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್​​ ಗರಂ

By

Published : Dec 28, 2019, 9:34 AM IST

ಬೆಂಗಳೂರು: ಪ್ರಯಾಣಿಕರು ಓಡಾಡುವ ಗೇಟ್ ಕ್ಲೋಸ್ ಮಾಡಿರುವ ವಿಚಾರಕ್ಕೆ ತಡರಾತ್ರಿಗೊರಗುಂಟೆ ಪಾಳ್ಯ ‌ಮೆಟ್ರೋ ಸಿಬ್ಬಂದಿ ಸಿಬ್ಬಂದಿಯನ್ನು ಪ್ರಯಾಣಿಕರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಮೆಟ್ರೋ ಸ್ಟೇಷನ್​ನಲ್ಲಿ ಎರಡು ಎಗ್ಸಿಟ್ ಗೇಟ್​​​​ಗಳಿದ್ದು, ಪ್ರಯಾಣಿಕರು ಗೊರಗುಂಟೆ ಪಾಳ್ಯ ಬಸ್ ಸ್ಟಾಪ್ ಕಡೆ ಇರುವ ಗೇಟ್ ಅನ್ನೇ ಹೆಚ್ಚಾಗಿ ಬಳಸುತ್ತಾರೆ. ಇದು ಮಹಿಳೆಯರಿಗೆ ಓಡಾಡಲು ಸುರಕ್ಷಿತವಾದ ಗೇಟ್ ಕೂಡ ಆಗಿತ್ತು. ಆದರೆ‌ ಸಿಬ್ಬಂದಿ ಕೊರತೆ ಎಂದು ರಾತ್ರಿ 10 ಗಂಟೆ ನಂತರ ಎಂಟ್ರಿ ಗೇಟ್ ಕ್ಲೋಸ್ ಮಾಡಿ, ಆರ್​ಎನ್​ಎಸ್ ಗೇಟ್ ಮೂಲಕ ಪ್ರಯಾಣಿಕರಿಗೆ ಓಡಾಡಲು ಅವಕಾಶ ಮಾಡಿ ಕೊಡಲಾಗಿದೆ.

ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಫುಲ್​​ ಗರಂ

ಆರ್​ಎನ್​ಎಸ್ ಗೇಟ್ ಮೂಲಕ ಗೊರಗುಂಟೆ ಬಸ್ ಸ್ಟಾಪ್ ತಲುಪಲು ಸುಮಾರು 200 ಮೀಟರ್ ದೂರ ಕ್ರಮಿಸಬೇಕು. ಮಾತ್ರವಲ್ಲದೇ ಈ ಭಾಗದಲ್ಲಿ ಬೆಳಕಿನ ಸಮಸ್ಯೆ ಕೂಡ ಇದ್ದು, ಮಹಿಳೆಯರು ಆತಂಕ ಎದುರಿಸುತ್ತಿದ್ದಾರೆ. ಗೊರಗುಂಟೆ ಬಸ್ ಸ್ಟಾಪ್ ಕಡೆ ಇರುವ ಗೇಟ್ ಓಪನ್ ಮಾಡಿದರೆ ಒಂದು ನಿಮಿಷದಲ್ಲಿ ಬಸ್ ಸ್ಟಾಪ್ ತಲುಪಬಹುದು. ಹಾಗಾಗಿ ಕ್ಲೋಸ್ ಮಾಡಿರುವ ಗೇಟ್ ಓಪನ್ ಮಾಡಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ರು.

ಈ ವಿಚಾರ ತಿಳಿದು ಮಾಧ್ಯಮದವರು ಸ್ಥಳಕ್ಕೆ ಭೇಟಿಕೊಟ್ಟು ಮೆಟ್ರೋ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದರೆ, ನಮ್ಮಲ್ಲಿ ಮ್ಯಾನ್ ಪವರ್ ಕಡಿಮೆ‌ ಇದೆ. ಹಾಗಾಗಿ ಗೇಟ್ ಕ್ಲೋಸ್ ಮಾಡಲಾಗಿದೆ.‌ ಈಗ ಓಪನ್ ಮಾಡ್ತೀವಿ ಎಂದು ನಂತರ ಗೇಟ್​ ಓಪನ್ ಮಾಡಿ ಪ್ರಯಾಣಿಕರು ಓಡಾಡಲು ಅನುವು ಮಾಡಿಕೊಟ್ಟರು.

ABOUT THE AUTHOR

...view details