ಕರ್ನಾಟಕ

karnataka

ETV Bharat / state

ಹೊಸ ವರ್ಷಾಚರಣೆಗೆ ಮೆಟ್ರೋ ಗಿಫ್ಟ್.. ಸಂಚಾರ ಅವಧಿ ಮಧ್ಯರಾತ್ರಿ 2 ಗಂಟೆವರೆಗೂ ವಿಸ್ತರಣೆ - BMRCL

ಮಧ್ಯರಾತ್ರಿ 2 ಗಂಟೆವರೆಗೂ ಸಂಚಾರ ಅವಧಿ ವಿಸ್ತರಿಸಿದ ನಮ್ಮ ಮೆಟ್ರೋ - ಟೋಕನ್​ ಬದಲು ಪೇಪರ್​ ಟಿಕೇಟ್​ ವಿತರಣೆ.

metro-gift-for-new-year-dot-dot-dot-traffic-period-extended-till-midnight-2-hours
ಹೊಸ ವರ್ಷಾಚರಣೆಗೆ ಮೆಟ್ರೋ ಗಿಫ್ಟ್... ಸಂಚಾರ ಅವಧಿ ಮಿಡ್ ನೈಟ್ 2 ಗಂಟೆವರೆಗೂ ವಿಸ್ತರಣೆ

By

Published : Dec 29, 2022, 3:12 PM IST

Updated : Dec 29, 2022, 3:24 PM IST

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಬಿಎಂಆರ್​ಸಿಎಲ್ ಮೆಟ್ರೋ ಸೇವೆಯನ್ನು ಮಧ್ಯರಾತ್ರಿ 2 ಗಂಟೆವರೆಗೆ ವಿಸ್ತರಣೆ ಮಾಡಿದೆ.
ಡಿಸೆಂಬರ್​ 31ರ ರಾತ್ರಿ 11.30 ರಿಂದ ಮಧ್ಯರಾತ್ರಿ 2 ಗಂಟೆಯವರೆಗೂ ಪ್ರತಿ 15 ನಿಮಿಷಗಳಿಗೊಮ್ಮೆ ಮೆಜೆಸ್ಟಿಕ್​ ನಿಂದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಟರ್ಮಿನಲ್​ಗಳಿಗೆ ಮೆಟ್ರೋ ರೈಲು ಸಂಚಾರ ಮಾಡಲಿದೆ ಎಂದು ನಮ್ಮ ಮೆಟ್ರೋ ಸಂಸ್ಥೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ವರ್ಷಾಚರಣೆಗೆ ಮೆಟ್ರೋ ಗಿಫ್ಟ್... ಸಂಚಾರ ಅವಧಿ ಮಿಡ್ ನೈಟ್ 2 ಗಂಟೆವರೆಗೂ ವಿಸ್ತರಣೆ

ಹೊಸ ವರ್ಷಾಚರಣೆಯಲ್ಲಿ ತೊಡಗುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮೆಟ್ರೋ ಸೇವೆಯನ್ನ ಮಧ್ಯರಾತ್ರಿ ತನಕ ವಿಸ್ತರಣೆ ಮಾಡಲಾಗಿದೆ. ವಿಸ್ತರಿಸಲಾದ ರಾತ್ರಿ 11.30 ರಿಂದ 2 ಗಂಟೆಯ ತನಕದ ಅವಧಿಯಲ್ಲಿ ಟ್ರಿನಿಟಿ, ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಎಂದಿನಂತೆ ನೀಡುವ ಟೋಕನ್​ಗಳು ಇರುವುದಿಲ್ಲ. ಇದರ ಬದಲು 50 ರೂಪಾಯಿ ಬೆಲೆಯ ಪೇಪರ್​ ಟಿಕೆಟ್​ಗಳನ್ನು ವಿತರಣೆ ಮಾಡಲಾಗುತ್ತದೆ.

ಟ್ರಿನಿಟಿ, ಮಹಾತ್ಮ ಗಾಂಧಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಡಿ.31ರ ರಾತ್ರಿ 8 ಗಂಟೆಯಿಂದಲೇ ಪೇಪರ್​ ಟಿಕೆಟ್​ಗಳು ಲಭ್ಯವಿರುತ್ತವೆ. ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂ ಆರ್ ಟಿಕೆಟಿಂಗ್ ಇರುವ ಪ್ರಯಾಣಿಕರು ವಿಸ್ತರಣೆ ಮಾಡಲಾದ ಅವಧಿಯಲ್ಲಿಯೂ ಇವುಗಳನ್ನು ಬಳಸಬಹುದಾಗಿದೆ. ಉಳಿದ ಮೆಟ್ರೋ ಸ್ಟೇಷನ್​ಗಳಲ್ಲಿ ವಿಸ್ತರಣೆ ಮಾಡಲಾದ ಅವಧಿಯಲ್ಲಿಯೂ ಟೋಕನ್​ಗಳು ದೊರೆಯಲಿವೆ.

ಇದನ್ನೂ ಓದಿ:ಹೊಸ ವರ್ಷದ ದಿನ ಎಲ್ಲೆಲ್ಲಿ ವಾಹನಗಳಿಗೆ ಎಂಟ್ರಿ ಇದೆ ಅಥವಾ ಇಲ್ಲ: ಇಲ್ಲಿದೆ ಕಂಪ್ಲೀಟ್ ಮಾಹಿತಿ!

Last Updated : Dec 29, 2022, 3:24 PM IST

ABOUT THE AUTHOR

...view details