ಕರ್ನಾಟಕ

karnataka

ETV Bharat / state

Metro crane collapsed: ಬೆಂಗಳೂರಲ್ಲಿ ಮೆಟ್ರೋ ಕಾಮಗಾರಿಯ ವೇಳೆ ಕುಸಿದ ಕ್ರೇನ್.. ಜು. 10 ರಿಂದ ಆ. 9ರ ವರೆಗೆ ಸಂಚಾರ ಸ್ಥಗಿತ - ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಮೆಟ್ರೋ ಕಾಮಗಾರಿಯ ಕ್ರೇನ್ ಕುಸಿದು ಬಿದ್ದಿರುವ ಘಟನೆ ಬೆಂಗಳೂರಿನ ಮಡಿವಾಳ ಬಳಿ ತಡರಾತ್ರಿ ನಡೆದಿದೆ.

metro crane collapsed
ಬೆಂಗಳೂರಲ್ಲಿ ಮೆಟ್ರೊ ಕಾಮಗಾರಿಯ ವೇಳೆ ಕ್ರೇನ್ ಕುಸಿತ

By

Published : Jul 8, 2023, 10:03 AM IST

Updated : Jul 8, 2023, 11:21 AM IST

ಬೆಂಗಳೂರು: ನಗರದ ಮಡಿವಾಳ ಬಳಿಯ ನಮ್ಮ ಮೆಟ್ರೋ ಕಾಮಗಾರಿ ನಿರ್ವಹಿಸುತ್ತಿದ್ದ ಕ್ರೇನ್ ಶುಕ್ರವಾರ ರಾತ್ರಿ ಕುಸಿದು ಬಿದ್ದಿದ್ದು, ಅಲ್ಲಿದ್ದ ಕಾರ್ಮಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಕುರಿತು ಟ್ವೀಟ್ ಮಾಡಿದ್ದ ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ, ಮೆಟ್ರೋ ಕಾಮಗಾರಿಯ ಕ್ರೇನ್‌ನಲ್ಲಿದ್ದ ಕಾರ್ಮಿಕರಾದ ಸುಜೀತ ಮತ್ತು ಸಲ್ಮಾನ್ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ರಸ್ತೆ ಮೇಲೆ ಕ್ರೇನ್ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಬಿಟಿಎಂನಿಂದ ಮಡಿವಾಳಕ್ಕೆ ಹೋಗುವವರು ಹೆಚ್‌ಎಸ್‌ಆರ್ 14ನೇ ಮುಖ್ಯ ರಸ್ತೆ ಮೂಲಕ ಸಾಗಬೇಕು ಎಂದಿದ್ದರು.

ಹೆಚ್‌ಎಸ್‌ಆರ್‌ನಿಂದ ಮಡಿವಾಳ ಕಡೆಗೆ ಬರುವವರು ಬಿಟಿಎಂ ಮೂಲಕ ಸಂಚರಿಸಬೇಕು. ಕ್ರೇನ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವವರೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದ್ದರು.

ಬೆಂಗಳೂರಲ್ಲಿ ಮೆಟ್ರೊ ಕಾಮಗಾರಿಯ ವೇಳೆ ಕ್ರೇನ್ ಕುಸಿತ

ಹೊರವರ್ತುಲ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಕ್ರೇನ್ ಜಾರಿ ಬಿದ್ದಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ. ಶನಿವಾರ ಬೆಳಗಿನ ವೇಳೆಗೆ ಕ್ರೇನ್ ಅನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಲಾಗಿದ್ದು, ಸುತ್ತಮುತ್ತಲಿನ ಸಾರ್ವಜನಿಕ ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ಬಂದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಮೆಟ್ರೊ ಕಾಮಗಾರಿಯ ವೇಳೆ ಕ್ರೇನ್ ಕುಸಿತ

ಬೆಳಗಿನ ವೇಳೆ ನಮ್ಮ ಮೆಟ್ರೋ ಸಂಚಾರ ಸ್ಥಗಿತ:ಜುಲೈ 10 ರಿಂದ ಆಗಸ್ಟ್ 9 ರವರೆಗೆ ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಬೈಯಪ್ಪನಹಳ್ಳಿ ಮತ್ತು ಎಸ್ ವಿ ರಸ್ತೆ ಹಾಗೂ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್ ನಿಲ್ದಾಣಗಳ ನಡುವಿನ ನಮ್ಮ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಪರ್ಪಲ್ ಲೈನ್ ಬರುವ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ಸಂಪರ್ಕ ಕಲ್ಪಿಸಲು ಸಿಗ್ನಲಿಂಗ್ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ಬೆಯ್ಯಪ್ಪನಹಳ್ಳಿ ಮತ್ತು ಎಸ್ ವಿ ರಸ್ತೆ, ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್ ನಡುವೆ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಲ್ಲಿ ಮೆಟ್ರೊ ಕಾಮಗಾರಿಯ ವೇಳೆ ಕ್ರೇನ್ ಕುಸಿತ

ಬೆಳಗ್ಗೆ 7 ಗಂಟೆಯ ನಂತರ ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಹಾಗೂ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣಗಳ ನಡುವೆ ಸಾರ್ವಜನಿಕ ರೈಲು ಸೇವೆಗಳು ಎಂದಿನಂತೆ ರಾತ್ರಿ 11 ಗಂಟೆಯವರೆಗೆ ಇರಲಿದೆ. ಈ ಸಮಯದಲ್ಲಿ ಗ್ರೀನ್ ಲೈನ್​​ನಲ್ಲಿನ ನಮ್ಮ ಮೆಟ್ರೋ ರೈಲು ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ ಪ್ರಕರಣ; ಐದು ತಿಂಗಳ ಬಳಿಕ ಚಾರ್ಜ್​​​ಶೀಟ್​​ ಸಲ್ಲಿಸಿದ ಪೊಲೀಸರು

Last Updated : Jul 8, 2023, 11:21 AM IST

ABOUT THE AUTHOR

...view details