ಕರ್ನಾಟಕ

karnataka

ETV Bharat / state

ರಾತ್ರಿ ವೇಳೆ ಆ್ಯಕ್ಟೀವ್ ಆಗ್ತಿದ್ದ ಕಾಮುಕ ; ಖ್ಯಾತ ಲೈಂಗಿಕ ತಜ್ಞೆ ಹೆಸರಿನಲ್ಲಿ ಮಹಿಳೆಯರಿಗೆ ಅಶ್ಲೀಲ 'ಸಂದೇಶ'! - message to women in the name of a sex expert

ನಿಜವಾಗಿಯೂ ವೈದ್ಯೆ ಎಂದು ನಂಬಿದ ಜನ, ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮೆಸೆಂಜರ್ ಮೂಲಕ ಹೇಳಿಕೊಂಡಿದ್ದಾರಂತೆ. ಬಳಿಕ ಖಾಸಗಿ ವಿಡಿಯೋ ಮಾಡಿ ಕಳಿಸುವಂತೆ ಮಹಿಳೆಯರ ಜೊತೆ ಆರೋಪಿ ಚಾಟಿಂಗ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ..

message-to-women-in-the-name-of-a-sex-expert
ಖಾತ್ಯ ಲೈಂಗಿಕ ತಜ್ಞೆ ಹೆಸರಿನಲ್ಲಿ ಮಹಿಳೆಯರಿಗೆ ಅಶ್ಲೀಲ ಸಂದೇಶ.!

By

Published : Jan 1, 2021, 4:09 PM IST

Updated : Jan 1, 2021, 7:55 PM IST

ಬೆಂಗಳೂರು :ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿದ ಕಾಮುಕನೊಬ್ಬ ಮಹಿಳೆಯರಿಗೆ ಅಶ್ಲೀಲ‌ ಸಂದೇಶ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಚಾರ ತಿಳಿದ ವೈದ್ಯೆ ಪದ್ಮಿನಿ ಪ್ರಸಾದ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್

ವೃತ್ತಿಯಲ್ಲಿ ವೈದ್ಯೆಯಾಗಿರುವ ಪದ್ಮಿನಿ ಪ್ರಸಾದ್ ಎಂಬುವರು ಅದೆಷ್ಟೋ ಪುರುಷ ಹಾಗೂ ಮಹಿಳೆಯರ ಲೈಂಗಿಕ ಸಮಸ್ಯೆಗಳನ್ನ ನಿವಾರಿಸಿದ್ದಾರೆ. ಇವರ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ, ಅದನ್ನೇ ಬಂಡವಾಳ ಮಾಡಿಕೊಂಡ ಕಾಮುಕನೊಬ್ಬ ವೈದ್ಯೆಯ ಹೆಸರಿನಲ್ಲಿ ಫೇಸ್​ಬುಕ್‌ನಲ್ಲಿ ನಕಲಿ ಖಾತೆ ತೆರೆದಿದ್ದಾನಂತೆ. ನಿಜವಾಗಿಯೂ ವೈದ್ಯೆ ಎಂದು ನಂಬಿದ ಜನ, ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮೆಸೆಂಜರ್ ಮೂಲಕ ಹೇಳಿಕೊಂಡಿದ್ದಾರಂತೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ : 6 ಜನರಿಗೆ ಗಂಭೀರ ಗಾಯ

ಬಳಿಕ ಖಾಸಗಿ ವಿಡಿಯೋ ಮಾಡಿ ಕಳಿಸುವಂತೆ ಮಹಿಳೆಯರ ಜೊತೆ ಆರೋಪಿ ಚಾಟಿಂಗ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನೇರವಾಗಿ ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಕ್ಲಿನಿಕ್​ಗೆ ಬರುತ್ತೇವೆ ಎಂದು ಮಹಿಳೆಯರು ಹೇಳಿದ್ರೆ ಕೊರೊನಾ ಕಾರಣ ಕೊಟ್ಟಿದ್ದಾನಂತೆ. ಇದರಿಂದ ಅನುಮಾನ ಬಂದು ಕೆಲ ಮಹಿಳೆಯರು ಪದ್ಮಿನಿ‌ ರಾವ್ ಅವರನ್ನೇ ಕೇಳಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.

Last Updated : Jan 1, 2021, 7:55 PM IST

For All Latest Updates

TAGGED:

ABOUT THE AUTHOR

...view details