ಬೆಂಗಳೂರು :ನಗರದಲ್ಲಿ ವ್ಯಾಪಾರ, ವಹಿವಾಟು ಆಗದ ಕಾರಣ ಸಾಕಷ್ಟು ಮಾಲೀಕರು ಅಂಗಡಿಗಳನ್ನು ಖಾಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ನಗರದ ಪ್ರತಿಷ್ಠಿತ ಮಾರುಕಟ್ಟೆ ಸ್ಥಳಗಳಾದ ಎಸ್‌ಪಿರಸ್ತೆ, ಮಜೆಸ್ಟಿಕ್, ಕಲಾಸಿಪಾಳ್ಯ ಸೇರಿ ಹಲವೆಡೆ ಅಂಗಡಿಗಳನ್ನು ಖಾಲಿ ಮಾಡಿದ ಪರಿಣಾಮ To-Let ಬೋರ್ಡ್ ಕಾಣ ಸಿಗುತ್ತಿವೆ. ಅಷ್ಟೇ ಅಲ್ಲ, ಮಾರುಕಟ್ಟೆ ಪ್ರದೇಶಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ಕಾರಣದಿಂದ ದಶಕಗಳಿಂದ ವ್ಯಾಪಾರ ನಡೆಸುತ್ತಿದ್ದವರ ಸ್ಥಿತಿ ಆರ್ಥಿಕವಾಗಿ ಚಿಂತಾಜನಕವಾಗಿದೆ.
ಅಂಗಡಿಗಳನ್ನು ಮುಚ್ಚಲು ಮುಂದಾದ ಮಾಲೀಕರು ಈ ಸಂಬಂಧ ಈಟಿವಿ ಭಾರತ್ಗೆ ಪ್ರತಿಕ್ರಿಯೆ ನೀಡಿದ ಚಿಕ್ಕಪೇಟೆ ಅಂಗಡಿ ಮಾಲೀಕ ದಿಲೀಪ್ ಕುಮಾರ್, ಸದ್ಯಕ್ಕೆ ರಾಜ್ಯ ಸರ್ಕಾರ ಪುನಃ ಲಾಕ್ಡೌನ್ ಹೇರಿದೆ 2 ತಿಂಗಳ ಬಳಿಕ ಅಂಗಡಿ ಬಾಡಿಗೆ, ನೌಕರರ ವೇತನ ವಿದ್ಯುತ್ನಂತಹ ಜವಾಬ್ದಾರಿಗಳನ್ನು ನಿರ್ವಹಿಸಬಹುದು ಎಂದು ಅಂಗಡಿಗಳನ್ನು ಪ್ರಾರಂಭ ಮಾಡಿದೆವು. ಆದರೆ, ಈಗ ಮರು ಲಾಕ್ಡೌನ್ ಆದರೆ ನಮ್ಮ ಸ್ಥಿತಿ ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದೂವರೆ ತಿಂಗಳು ಸಾಲ ಮಾಡಿ ನಮ್ಮ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಯಿತು, ಈಗ ಲಾಕ್ಡೌನ್ ಆದರೆ ನಮಗೆ ವೇತನ ನೀಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ನೌಕರರು ಊರುಗಳಿಗೆ ತೆರಳಿದ್ದಾರೆ. ಕೊರೊನಾ ಮಹಾಮಾರಿಗೆ ಹೆದರಿರುವ ಕಾರಣ ಅವರು ಮರಳಿ ಬರುವುದು ಕಷ್ಟ ಎಂದರು.
ಸರ್ಕಾರ ಹೇಳುವ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಪಾಲಿಸುತ್ತೇವೆ. ನಮಗೆ ಲಾಕ್ಡೌನ್ ಬೇಡ ಎಂದು ಸರ್ಕಾರಕ್ಕೆ ಈಟಿವಿ ಭಾರತ್ ಮೂಲಕ ಮನವಿ ಮಾಡಿದರು.