ಬೆಂಗಳೂರು: ಸಿಲಿಕಾನ್ ಸಿಟಿ ಸಂಪೂರ್ಣವಾಗಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸ್ತಬ್ದವಾಗಿದೆ. ಆದರೆ, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸೇವೆಯಾದ ತರಕಾರಿ ಹಣ್ಣು ಹಂಪಲು ಮಾರಾಟಕ್ಕೆ ಅನುಮತಿ ನೀಡಿದೆ.
ಅಗತ್ಯ ಸೇವೆಯಲ್ಲಿರುವವರಿಗೂ ಪೊಲೀಸ್ ನಿಬಂಧನೆ: ವ್ಯಾಪಾರಿಗಳ ಅಭಿಪ್ರಾಯ ಏನು?
ಅಗತ್ಯ ಸೇವೆ ಮಾಡುತ್ತಿರುವವರಿಗೆ ಪೊಲೀಸರು ನಿಬಂಧನೆಗಳನ್ನು ವಿಧಿಸಿದ್ದು, ಈ ಕುರಿತು ವ್ಯಾಪಾರಸ್ಥರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ವ್ಯಾಪಾರಸ್ಥರ ಅಭಿಪ್ರಾಯ
ಈ ಹಿನ್ನೆಲೆಯಲ್ಲಿ ಮುಂಜಾನೆ 5ರಿಂದ ವ್ಯಾಪಾರ ಶುರು ಮಾಡಿದ್ದು, ಮಧ್ಯಾಹ್ನ 12ಗಂಟೆ ಬಳಿಕ ಸಂಪೂರ್ಣವಾಗಿ ಬಂದ್ ಮಾಡಲಿದ್ದಾರೆ. ಈ ಕುರಿತು ವ್ಯಾಪಾರಸ್ಥರು ಈಟಿವಿ ಭಾರತದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.