ಕರ್ನಾಟಕ

karnataka

ETV Bharat / state

ಉದ್ಯೋಗಸ್ಥ ಮಹಿಳೆಗೆ ಋತುಚಕ್ರ ರಜೆ: ವಿಶ್ವಾಸ ಮೂಡಿಸಿದ ಸಿಎಂ ಸಿದ್ದರಾಮಯ್ಯ ಭರವಸೆ - ಪ್ರಸೂತಿ ಮತ್ತು ಸ್ತ್ರೀ ರೋಗ

ರಾಜ್ಯದಲ್ಲಿ ಸರ್ಕಾರಿ ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವ ಬಗ್ಗೆ ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು.

ಉದ್ಯೋಗಸ್ಥ ಮಹಿಳೆಗೆ ಋತುಚಕ್ರ ರಜೆ
ಉದ್ಯೋಗಸ್ಥ ಮಹಿಳೆಗೆ ಋತುಚಕ್ರ ರಜೆ

By

Published : Jul 17, 2023, 10:50 PM IST

ಬೆಂಗಳೂರು : ಋತುಚಕ್ರದ ಸಮಯದಲ್ಲಿ ದುಡಿಯುವ ಮಹಿಳೆಯರಿಗೆ ರಜೆ ನೀಡಬೇಕು ಎನ್ನುವ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆ ಸಮಯದಲ್ಲಾಗುವ ನೋವಿನ ಯಾತನೆ ಹಾಗೂ ಹಿಂಸೆಯನ್ನು ಅನುಭವಿಸುತ್ತಿರುವ ನೌಕರಿಗೆ ಹೋಗುವ ಮಹಿಳೆಯರು ರಜೆ ನೀಡಬೇಕು ಎಂಬ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

ಸರ್ಕಾರಕ್ಕೆ ಈ ಕುರಿತು ಈ ಹಿಂದೆ ಮನವಿ ಸಲ್ಲಿಸುತ್ತಲೇ ಬರಲಾಗಿತ್ತು. ಜೊತೆಗೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗಿತ್ತು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಯುವತಿಯೊಬ್ಬರು ಕೇಳಿದ ಪ್ರಶ್ನೆಗೆ ಈ ಕುರಿತು ಪರಿಶೀಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ಋತುಚಕ್ರದಿಂದ ಬಳಲುತ್ತಿರುವ ಮಹಿಳೆಯರಿಗೆ ರಜೆ ಸಿಗುವ ವಿಶ್ವಾಸ ಮೂಡಿದೆ.

ಋತುಚಕ್ರದ ಸಮಯದಲ್ಲಿ ಕೆಲವು ಮಹಿಳೆಯರು ನೋವನ್ನು ಉಂಟುಮಾಡುವ ಡಿಸ್ಮೆನೊರಿಯಾ ಎಂಬ ಸ್ಥಿತಿಯನ್ನು ಅನುಭಸುತ್ತಾರೆ. ಕೆಲಸದ ಸ್ಥಳಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಪಿರಿಯಡ್ಸ್ ಬಗ್ಗೆ ಮುಕ್ತ ಚರ್ಚೆ ನಡೆಸುವುದು ತುಂಬಾ ಕಷ್ಟಕರವಾಗಿದೆ. ಈ ಸಮಯದಲ್ಲಿ ಮಹಿಳೆಯರು ಕೆಲಸಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಅವಳ ಉದ್ಯೋಗದಿಂದ ಪಾವತಿಸಿದ ಅಥವಾ ಪಾವತಿಸದ ರಜೆಯನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಬಹುದೆಂಬ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೇ ಕೆಲವು ದೇಶಗಳು ನೀತಿಗಳನ್ನು ಜಾರಿಗಳಿಸಿವೆ.

ಋತುಚಕ್ರದ ರಜೆ ಬೇಡಿಕೆ ಕುರಿತು ಸಿಎಂ ಪರಿಶೀಲನೆ :ನಮ್ಮ ರಾಜ್ಯದಲ್ಲೂ ಸರ್ಕಾರಿ ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವ ಬಗ್ಗೆ ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಈ ರಜೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಈ ಬಗ್ಗೆ ಯಾವಾಗ ತೀರ್ಮಾನ ಕೈಗೊಳ್ಳುತ್ತೀರಾ ಎಂದು ಯುವತಿಯೊಬ್ಬಳು ಇತ್ತೀಚೆಗೆ ಕೇಳಿರುವ ಪ್ರಶ್ನೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಕೆಲವು ದೇಶದಲ್ಲಿ ಮುಟ್ಟಿನ ರಜೆಗೆ ಅಸ್ತು :ಮಹಿಳೆಯರು ಋತುಚಕ್ರ ಸಮಯದಲ್ಲಿ ವಿಶ್ರಾಂತಿ ಪಡೆಯುವ ಹಕ್ಕನ್ನು ಕೇಳದೆ. ನೋವನ್ನು ತಮ್ಮಲ್ಲಿಯೇ ಅನುಭವಿಸುತ್ತಾರೆ. ಎಂಡೋಮೆಟ್ರಿಯೊಸಿಪ್ ಸೊಸೈಟಿ ಇಂಡಿಯಾದ ಅಂದಾಜಿನ ಪ್ರಕಾರ 25 ದಶಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಎಂಡೊಮೆಟ್ರಿಯೊಸಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಮನಸ್ಥಿತಿಯನ್ನರಿತ ಜಪಾನ್, ದಕ್ಷಿಣ ಕೊರಿಯಾ, ಇಟಲಿಯಂತಹ ಹಲವು ದೇಶಗಳಲ್ಲಿ ಅಷ್ಟೆ ಏಕೆ ನಮ್ಮ ನೆರೆ ರಾಜ್ಯವಾದ ಕೇರಳದಲ್ಲೂ ಪ್ರತಿ ತಿಂಗಳು ಮಹಿಳೆಯರಿಗೆ ಮುಟ್ಟಿನ ರಜೆಯನ್ನು ನೀಡುತ್ತಿದೆ.

ರೋಲರ್ ಕೋಸ್ಟರ್ ದಿನಗಳು : ವಿದ್ಯಾರ್ಥಿನಿಯರಿಗೆ ತಿಂಗಳಿನಲ್ಲಿ ನಾಲ್ಕರಿಂದ ಐದು ದಿನ ಮತ್ತು ಮಹಿಳೆಯರಿಗೆ ಮೂರು ದಿನಗಳ ಋತುಚಕ್ರದ ದಿನಗಳಾಗಿರುತ್ತವೆ. ಆಗ ಅತೀ ರಕ್ತಸ್ರಾವದಿಂದಾಗಿ ಅವರ ಆರೋಗ್ಯದಲ್ಲಿ ಅನೇಕ ರೀತಿಯ ಸಮಸ್ಯೆಗಳಾಗುವ ಸಾಧ್ಯತೆಗಳಿವೆ. ಕೆಲವರಿಗೆ ನಿಲ್ಲುವುದಕ್ಕೂ ಆಗದಿರುವ ಸ್ಥಿತಿಯಲ್ಲಿರುತ್ತಾರೆ. ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಅವರಿಗೆ ರೋಲರ್ ಕೋಸ್ಟರ್ ದಿನಗಳಾಗಿರುತ್ತವೆ. ಹಾಗಾಗಿ ಶಾಲೆ/ಕಾಲೇಜುಗಳಿಗೆ ಬರಲು ಸಾಧ್ಯವಾಗದಿರಬಹುದು. ಈ ಕಾರಣಕ್ಕಾಗಿಯೇ ಉದ್ಯೋಗಸ್ಥ ಮಹಿಳೆಯರು ಮುಟ್ಟಿನ ರಜೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಹೆಣ್ಣಿನ ನೈಸರ್ಗಿಕ ಪ್ರಕ್ರಿಯೆ : ಋತುಮಾನವೊಂದು ಹೆಣ್ಣಿನ ನೈಸರ್ಗಿಕ ಪ್ರಕ್ರಿಯೆ. ಇದು ಪ್ರತಿ ತಿಂಗಳು ಪ್ರತಿಯೊಬ್ಬ ಮಹಿಳೆಯೂ ಅನುಭವಿಸುತ್ತಾಳೆ. ತುಂಬಾ ಅಗತ್ಯವಿರುವ ಮಹಿಳೆಗೆ ಮಾತ್ರ ಈ ರಜೆಯನ್ನು ನೀಡಿದರೆ ಸಾಕು. ಆರೋಗ್ಯ ಋತುಮಾನದ ಮಹಿಳೆಯರಿಗೆ ಇದು ಅಗತ್ಯ ಇರುವುದಿಲ್ಲ ಎಂದು ಕ್ಲೌಡ್ ನೈನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪಿ.ಎಂ. ಕವಿತಾ ಹೇಳಿದ್ದಾರೆ.

ಚರ್ಚೆ ಮಾಡಲು ಮುಜುಗರ ಭಾವ : ಋತುಚಕ್ರದ ಸಮಯ ಬಂದಾಗ ನಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮಸ್ಯೆಗಳನ್ನು ನಾವು ಅನುಭವಿಸುತ್ತಿದ್ದೇವೆ. ಬೇರೊಬ್ಬರಲ್ಲಿ ಈ ವಿಚಾರವಾಗಿ ಚರ್ಚೆ ಮಾಡಲು ಮುಜುಗರ ಭಾವ ಹೊಂದುವುದರಿಂದ ಹೆಣ್ಣು ಮಕ್ಕಳಿಗೆ ಆ ವೇಳೆಯಲ್ಲಿ ರಜೆ ನೀಡಬೇಕು ಎಂದು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿ.ಕಾಂ ವಿದ್ಯಾರ್ಥಿನಿ ಹರ್ಷಿತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಆರೋಗ್ಯಕರ ಋತುಚಕ್ರದ 5 ಚಿಹ್ನೆಗಳು: ಸ್ವಲ್ಪ ಅಸಮಾತೋಲನವಾದರೂ ನಿರ್ಲಕ್ಷ್ಯ ಸರಿಯಲ್ಲ..

ABOUT THE AUTHOR

...view details