ಬೆಂಗಳೂರು:ಕೊರೊನಾ ಬಂದ ಬಳಿಕ ಕೊಲೆ, ಕಳ್ಳತನ, ಸರಗಳ್ಳತನ, ದರೋಡೆ, ಬೈಕ್ ಕಳ್ಳತನ ಸೇರಿದಂತೆ ಅನೇಕ ಅಪರಾಧಗಳು ಹೆಚ್ಚಾಗುತ್ತಿದ್ದು, ತಮ್ಮದೇ ಒಂದು ಗ್ಯಾಂಗ್ ಮಾಡಿಕೊಂಡು ಅಪರಾಧ ಕೃತ್ಯಗಳಲ್ಲಿ ಅನೇಕರು ಭಾಗಿಯಾಗ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಸರಗಳ್ಳತನ ಜಾಸ್ತಿಯಾಗ್ತಿದ್ದು, ಮನೆ ಮುಂದೆ ರಂಗೋಲಿ ಹಾಕುವವರು, ಮುಂಜಾನೆ ವಾಕಿಂಗ್ ಹೋಗುವವರು ಹಾಗೂ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಕ್ಷಣಾರ್ಧದಲ್ಲಿ ಸರಗಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗ್ತಿವೆ. ರಾಜಾರೋಷವಾಗಿ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದು, ಸಾರ್ವಜನಿಕರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಖಾಕಿ ಫುಲ್ ಅಲರ್ಟ್ ಆಗಿದ್ದು, ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಮಟ್ಟ ಹಾಕಲಾಗುತ್ತಿದೆ. ಇನ್ನು ವರ್ಷ ಸಿಲಿಕಾನ್ ಸಿಟಿಯಲ್ಲಿ 225 ಸರಗಳ್ಳತನದ ಪ್ರಕರಣಗಳು ದಾಖಲಾಗಿದ್ದು, 193 ಜನರನ್ನು ಬಂಧಿಸಲಾಗಿದೆ.