ಕರ್ನಾಟಕ

karnataka

ETV Bharat / state

ಆರು ತಿಂಗಳು ಬಿಟ್ಟಿದ್ರೆ ಬೆಂಗಳೂರನ್ನ ಉಡೀಸ್​​ ಮಾಡ್ತಿದ್ನಂತೆ ಜಿಹಾದಿ ಗ್ಯಾಂಗ್​​​ ಲೀಡರ್​​! - ಜಿಹಾದಿ ಗ್ಯಾಂಗ್​ನ ಪ್ರಮುಖ ಆರೋಪಿ ಮೆಹಬೂಬ್ ಪಾಷ

ಜಿಹಾದಿ ಗ್ಯಾಂಗ್​ನ ಪ್ರಮುಖ ಆರೋಪಿ ಮೆಹಬೂಬ್ ಪಾಷ, ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ರೆಡಿಯಾಗಿದ್ದನಂತೆ. ಇನ್ನು ಆರು ತಿಂಗಳಲ್ಲಿ ವಿಧ್ವಂಸಕ ಕೃತ್ಯವೆಸಗಲು ಎಲ್ಲಾ ರೀತಿಯ ವಸ್ತುಗಳನ್ನು ತಯಾರಿ ಮಾಡಿಕೊಂಡಿರುವ ವಿಚಾರ ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮೆಹಬೂಬ್ ಪಾಷ, Mehboob Pasha revealed Horrible information about bangalore blast
ಮೆಹಬೂಬ್ ಪಾಷ

By

Published : Jan 24, 2020, 2:29 PM IST

ಬೆಂಗಳೂರು: ನಗರದಲ್ಲಿ ಬೀಡುಬಿಟ್ಟಿದ್ದ ಜಿಹಾದಿ ಗ್ಯಾಂಗ್​ನ ಪ್ರಮುಖ ಆರೋಪಿ ಮೆಹಬೂಬ್ ಪಾಷನನ್ನ ಸಿಸಿಬಿ ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿದ್ದಾರೆ. ಈತ ತನಿಖೆ ವೇಳೆ ಕೆಲ ಭಯಾನಕ ಮಾಹಿತಿಗಳನ್ನು ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈತ ರಾಜ್ಯದಲ್ಲಿ ಹಾಗೂ ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ರೆಡಿಯಾಗಿದ್ದನಂತೆ. ಇನ್ನು ಆರು ತಿಂಗಳಲ್ಲಿ ವಿಧ್ವಂಸಕ ಕೃತ್ಯವೆಸಗಲು ಎಲ್ಲಾ ರೀತಿಯ ವಸ್ತುಗಳನ್ನು ತಯಾರಿ ಮಾಡಿಕೊಂಡಿರುವ ವಿಚಾರ ಬಾಯಿಬಿಟ್ಟಿದ್ದಾನೆ.

ಅಲ್ಪಸಂಖ್ಯಾತ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಎಕ್ಸ್​ಪರ್ಟ್​ಗಳನ್ನು ಗುರುತಿಸಿದ ನಂತರ ಜಿಹಾದಿ ಗ್ಯಾಂಗ್​ಗೆ ಸೇರಿಸಿದ್ದನಂತೆ. ಇನ್ನು ಸಿಲಿಕಾನ್ ಸಿಟಿಯನ್ನ ಯಾವ ರೀತಿ ಉಡೀಸ್ ಮಾಡಬೇಕೆಂದು ತರಬೇತಿ ನೀಡುತ್ತಿದ್ದನಂತೆ.

ಹಿನ್ನೆಲೆ:
ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ವಾಸವಾಗಿದ್ದ ಮೆಹಾಬೂಬ್ ಪಾಷ, ಬೆಂಗಳೂರು ಜಿಹಾದಿ ಗ್ಯಾಂಗ್​ನ ಕಮಾಂಡರ್​ ಆಗಿದ್ದ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಿಹಾದಿ ಗ್ಯಾಂಗ್ ಸೃಷ್ಟಿ ಮಾಡಲು‌ ಸದಸ್ಯರ ನೇಮಕ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿ ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ತರಬೇತಿ ನೀಡುತ್ತಿದ್ದನಂತೆ.

ಇಷ್ಟು ಮಾತ್ರವಲ್ಲದೆ, ಬನ್ನೇರುಘಟ್ಟ ರಸ್ತೆಯಲ್ಲಿ ‌ಅಲ್ ಹಿಂದ್ ಟ್ರಸ್ಟ್ ಸ್ಥಾಪಿಸಿ ಜಿಹಾದಿ ಸಂಘಟನೆಗೆ ಮುಂದಾಗಿದ್ದ. ಸದ್ಯ ಸಿಸಿಬಿ ವಶದಲ್ಲಿದ್ದು, ಬಹಳಷ್ಟು ಪ್ರಮುಖ ಮಾಹಿತಿಯನ್ನ ತನಿಖಾಧಿಕಾರಿಗಳ ಎದುರು ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ABOUT THE AUTHOR

...view details