ಕರ್ನಾಟಕ

karnataka

ETV Bharat / state

ಅಂಚೆ ಇಲಾಖೆಯ ಕರ್ನಾಟಕ ವಲಯದ ಇಬ್ಬರಿಗೆ 'ಮೇಘದೂತ್' ಪ್ರಶಸ್ತಿ - ಅಂಚೆ ಇಲಾಖೆ ಇಬ್ಬರಿಗೆ ಮೇಘದೂತ್ ಪ್ರಶಸ್ತಿ

ಅಖಿಲ ಭಾರತ ಅಂಚೆ ಇಲಾಖೆ ನೀಡುವ ಮೇಘದೂತ್ ಪ್ರಶಸ್ತಿಯನ್ನು ಕರ್ನಾಟಕ ಅಂಚೆ ವಲಯದ ಇಬ್ಬರು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ರಾಜಭವನಲ್ಲಿರುವ ಪ್ರಧಾನ ಅಂಚೆ ಕಚೇರಿಯ ಮೇಘದೂತ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅಂಚೆ ಇಲಾಖೆಯ ಕರ್ನಾಟಕ ವಲಯದ ಇಬ್ಬರಿಗೆ ಮೇಘದೂತ್ ಪ್ರಶಸ್ತಿ
Postal Department Two people of Karnataka got Meghaduta Award

By

Published : Dec 16, 2020, 11:40 AM IST

ಬೆಂಗಳೂರು: ಅಖಿಲ ಭಾರತ ಅಂಚೆ ಇಲಾಖೆ ನೀಡುವ ಮೇಘದೂತ್ ಪ್ರಶಸ್ತಿಯನ್ನು ಕರ್ನಾಟಕ ಅಂಚೆ ವಲಯದ ಇಬ್ಬರು ಅಧಿಕಾರಿಗಳು ಪಡೆದುಕೊಂಡಿದ್ದಾರೆ.

ರಾಜಭವನಲ್ಲಿರುವ ಪ್ರಧಾನ ಅಂಚೆ ಕಚೇರಿಯ ಮೇಘದೂತ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಮೋಟರ್ ಮೇಲ್ ಸರ್ವಿಸ್​​​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕೃಷ್ಣ ಹಾಗೂ ಬೆಂಗಳೂರು ಸೀನಿಯರ್ ಸೂಪರಿಂಟೆಂಡೆಂಟ್ ಅಧಿಕಾರಿಯಾಗಿರುವ ಬಿ.ಎಸ್.ಚಂದ್ರಶೇಖರ್ ಅವರನ್ನು ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಪ್ರಶಸ್ತಿ ನೀಡಿ ಗೌರವಿಸಿದರು.

ಓದಿ: ವಿಜಯ್ ದಿವಸ್ : ಹುತಾತ್ಮ ಯೋಧರಿಗೆ ಸಿಎಂ ಯಡಿಯೂರಪ್ಪ ಗೌರವ

ಬಳಿಕ ಮಾತನಾಡಿದ ಶಾರದಾ ಸಂಪತ್, ಉದ್ಯೋಗಿಗಳ ಮೌಲ್ಯಮಾಪನ ಹಾಗೂ ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಪ್ರಶಸ್ತಿ ಪುರಸ್ಕೃತರಿಗೂ ಸ್ಫೂರ್ತಿ ನೀಡಲಿದೆ. ಕೊರೊನಾ ಸಮಯದಲ್ಲಿ ಇಡೀ ದೇಶದಲ್ಲಿ ಅಂಚೆ ಇಲಾಖೆ ಅತ್ಯುನ್ನತ ಕಾರ್ಯ ಗಳಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ABOUT THE AUTHOR

...view details