ಕರ್ನಾಟಕ

karnataka

ETV Bharat / state

ಮಾರ್ಚ್‌ 27ರಂದು ರಾಜ್ಯಾದ್ಯಂತ ಮೆಗಾ ಲೋಕ್ ಅದಾಲತ್.. ಸದುಪಯೋಗಕ್ಕೆ ನ್ಯಾ. ಅರವಿಂದ್ ಕುಮಾರ್​ ಕರೆ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ 20,22,284 ಲಕ್ಷ ಪ್ರಕರಣಗಳು ಬಾಕಿಯಿವೆ. ಇದರಲ್ಲಿ 2,74,684 ಪ್ರಕರಣಗಳನ್ನು ಮೆಗಾ ಅದಾಲತ್​​ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಲು ಗುರುತಿಸಲಾಗಿದೆ. ಇದಲ್ಲದೇ, ಆ ದಿನ ಉಭಯ ಕಕ್ಷಿದಾರರು ತಮ್ಮ ವಕೀಲರೊಂದಿಗೆ ಆಗಮಿಸಿ ಅಂದೇ ತಮ್ಮ ವ್ಯಾಜ್ಯ ಬಗೆಹರಿಸಿಕೊಳ್ಳಲು ಕೋರಬಹುದು..

By

Published : Mar 24, 2021, 9:30 PM IST

Bangalore
ನ್ಯಾ. ಅರವಿಂದ್ ಕುಮಾರ್

ಬೆಂಗಳೂರು :ಮಾರ್ಚ್‌ 27ರಂದು ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ನಡೆಯಲಿದೆ. ಅದರ ಸದುಪಯೋಗ ಪಡೆದುಕೊಳ್ಳುವಂತೆ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಯೂ ಆಗಿರುವ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಅರವಿಂದ್ ಕುಮಾರ್ ಕರೆ ನೀಡಿದ್ದಾರೆ.

ನ್ಯಾ. ಅರವಿಂದ್ ಕುಮಾರ್

ಈ ಕುರಿತು ಇಂದು ಸಂಜೆ ಹೈಕೋರ್ಟ್ ಪ್ಯಾಟ್ರನ್ ಇನ್ ಚೀಫ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನ್ಯಾ. ಅರವಿಂದ್ ಕುಮಾರ್, ಕಕ್ಷಿದಾರರು ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ಮೆಗಾ ಲೋಕ್ ಅದಾಲತ್​​ನಲ್ಲಿ ಬಗೆಹರಿಸಿಕೊಳ್ಳಲು ಮುಂದಾಗಬೇಕು.

ಆದಾಲತ್​​ನಲ್ಲಿ ಮೋಟರು ವಾಹನ ಅಪಘಾತ ಪ್ರಕರಣಗಳು, ಹಣಕಾಸು ವ್ಯಾಜ್ಯಗಳು ಸೇರಿ ರಾಜಿ ಮಾಡಿಕೊಳ್ಳಬಹುದಾದ ಯಾವುದೇ ಬಗೆಯ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಈ ಅವಕಾಶವನ್ನು ಕಕ್ಷಿದಾರರು ಬಳಸಿಕೊಳ್ಳಲು ಮುಂದಾಗಬೇಕು ಎಂದರು.

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ 20,22,284 ಲಕ್ಷ ಪ್ರಕರಣಗಳು ಬಾಕಿಯಿವೆ. ಇದರಲ್ಲಿ 2,74,684 ಪ್ರಕರಣಗಳನ್ನು ಮೆಗಾ ಅದಾಲತ್​​ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಲು ಗುರುತಿಸಲಾಗಿದೆ. ಇದಲ್ಲದೇ, ಆ ದಿನ ಉಭಯ ಕಕ್ಷಿದಾರರು ತಮ್ಮ ವಕೀಲರೊಂದಿಗೆ ಆಗಮಿಸಿ ಅಂದೇ ತಮ್ಮ ವ್ಯಾಜ್ಯ ಬಗೆಹರಿಸಿಕೊಳ್ಳಲು ಕೋರಬಹುದು ಎಂದರು.

ಇದೇ ವೇಳೆ ಹಿಂದಿನ ಅದಾಲತ್​​ಗಳ ಕುರಿತು ನೆನಪು ಮಾಡಿಕೊಂಡ ನ್ಯಾ. ಅರವಿಂದ್ ಕುಮಾರ್, 2020ರ ಡಿ.19ರಂದು ನಡೆದ ಮೆಗಾ ಇ-ಲೋಕ್ ಅದಾಲತ್​ನಲ್ಲಿ 2.63 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ರಾಜ್ಯದ ಬೊಕ್ಕಸಕ್ಕೆ 41.59 ಕೋಟಿ ದಂಡ ಸಂಗ್ರಹಿಸಿ ಕೊಡಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿದ ಕುರಿತು ಸ್ವತಃ ಸಿಜೆಐ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ABOUT THE AUTHOR

...view details