ಕರ್ನಾಟಕ

karnataka

ETV Bharat / state

ಕನ್ನಡ ಚಿತ್ರೋದ್ಯಮ ಪುನಶ್ಚೇತನಕ್ಕೆ ಹಿರಿಯ ನಟರೊಂದಿಗೆ ಸಭೆ ನಡೆದಿದೆ: ಸಿ.ಟಿ.ರವಿ - Minister C T Ravi

ಕನ್ನಡ ಚಲನಚಿತ್ರೋದ್ಯಮದ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಡಾ. ಶಿವರಾಜ್​​​ಕುಮಾರ್ ನಿವಾಸದಲ್ಲಿ ಇವತ್ತು ಸಭೆ ನಡೆಯಿತು ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

Meeting regarding revival of Kannada film industry is done
ಕನ್ನಡ ಚಿತ್ರೋದ್ಯಮ ಪುನಶ್ಚೇತನಕ್ಕೆ ಈಗಾಗಲೇ ಹಿರಿಯ ನಟರೊಂದಿಗೆ ಸಭೆ ನಡೆದಿದೆ: ಸಿ. ಟಿ. ರವಿ

By

Published : Jul 29, 2020, 3:38 PM IST

ಬೆಂಗಳೂರು:ಕನ್ನಡ ಚಲನಚಿತ್ರೋದ್ಯಮದ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಡಾ. ಶಿವರಾಜ್​​ಕುಮಾರ್ ನಿವಾಸದಲ್ಲಿ ಇವತ್ತು ಸಭೆ ನಡೆಯಿತು ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಕನ್ನಡ ಚಿತ್ರೋದ್ಯಮ ಪುನಶ್ಚೇತನಕ್ಕೆ ಈಗಾಗಲೇ ಹಿರಿಯ ನಟರೊಂದಿಗೆ ಸಭೆ ನಡೆದಿದೆ: ಸಿ.ಟಿ.ರವಿ

ವಿಧಾನಸೌಧದ ಮುಂಭಾಗ ಸುದ್ದಿಗಾರರ ಜೊತೆ ಅವರು ಮಾತನಾಡಿ, ಸಭೆಯಲ್ಲಿ ಚಲನಚಿತ್ರ ಹಿರಿಯ ನಟರಾದ ರವಿಚಂದ್ರನ್ ಸೇರಿದಂತೆ ಯಶ್, ಗಣೇಶ್​, ದುನಿಯಾ ವಿಜಯ್​, ಪುನೀತ್ ರಾಜಕುಮಾರ್​, ಮುರುಳಿ ಹೀಗೆ ಹಲವಾರು ನಟರು ಪಾಲ್ಗೊಂಡಿದ್ದರು. ಈ ವೇಳೆ ಕಿರುತೆರೆ ಕಲಾವಿದರು, ಸಹಕಲಾವಿದರು, ಉದ್ಯಮವನ್ನು ಅವಲಂಬಿಸಿರುವವರಿಗೆ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದಾರೆ ಎಂದು ವಿವರಿಸಿದರು.

ಸಭೆ ನಡೆದಿದೆ, ಇನ್ನು ಮಂದಿನದ್ದು ಸಿಎಂ ತೀರ್ಮಾನ ಮಾಡಬೇಕು. ಅವರಿಗೆಲ್ಲಾ ಸಿಎಂರನ್ನು ಭೇಟಿ ಮಾಡಿಸುವುದಾಗಿ ಹೇಳಿದ್ದೇನೆ. ನಮ್ಮನ್ನೂ ಎಂಎಸ್‌ಎಂಇ ಅಡಿಯಲ್ಲಿ ಸೇರಿಸಬೇಕು ಎಂದು ಕೇಳ್ಕೊಂಡಿದ್ದಾರೆ. ತೆರಿಗೆ ವಿನಾಯ್ತಿ ಸೇರಿದಂತೆ ಹಲವು ಬೇಡಿಕೆ ಸಲ್ಲಿಸಿದ್ದಾರೆ. ನಾನು ಏಕಾಂಗಿಯಾಗಿ ಏನನ್ನೂ ತೀರ್ಮಾನ ಮಾಡಲಾಗುವುದಿಲ್ಲ. ಸಿಎಂ ಅವರೊಂದಿಗೆ ಸಭೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

ಚಿತ್ರಮಂದಿರ ಆರಂಭ ಮಾಡುವ ವಿಚಾರ, ಜಿಮ್ ಆರಂಭ ಮಾಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. ರಾಜ್ಯ ಸರ್ಕಾರ ತೀರ್ಮಾನ ಮಾಡಲಾಗುವುದಿಲ್ಲ ಎಂದರು.

ABOUT THE AUTHOR

...view details