ಕರ್ನಾಟಕ

karnataka

ETV Bharat / state

ವಾಲ್ಮೀಕಿ ಮೀಸಲಾತಿ ವಿಚಾರಕ್ಕೆ ಸಿಎಂ ಸ್ಪಂದಿಸಿದ್ದಾರೆ... ಪ್ರಸನ್ನಾನಂದ ಪುರಿ ಸ್ವಾಮೀಜಿ - ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ

ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ಆದಷ್ಟು ಬೇಗ ವರದಿ ಕೊಡಲು, ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ಸೂಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ವಾಲ್ಮೀಕಿ ಗುರುಪೀಠದ .

Meeting on the increase in reservation of Valmiki community
ಪ್ರಸನ್ನಾನಂದ ಪುರಿ ಸ್ವಾಮೀಜಿ

By

Published : Jan 6, 2020, 7:41 PM IST

ಬೆಂಗಳೂರು: ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ಆದಷ್ಟು ಬೇಗ ವರದಿ ಕೊಡಲು, ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ಸೂಚಿಸುತ್ತೇನೆಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸರ್ಕಾರ ಈ ವಿಷಯದಲ್ಲಿ ಯಾವುದೇ ವಿಳಂಬ ನೀತಿ ಅನುಸರಿಸುವುದಿಲ್ಲ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್​ವೈ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ಸಭೆ ನಡೆಯಿತು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸಚಿವ ಶ್ರೀರಾಮುಲು, ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಜೆ. ಎನ್. ಗಣೇಶ್, ರಾಜುಗೌಡ ಹಾಗೂ ಸಂಸದ ದೇವೇಂದ್ರಪ್ಪ ಪಾಲ್ಗೊಂಡಿದ್ದರು.

ಸಭೆ ಆರಂಭಗೊಳ್ಳುತ್ತಿದ್ದಂತೆ ನಮ್ಮ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ನಮ್ಮ ಸಮುದಾಯ ಮೀಸಲಾತಿಗೆ ಅರ್ಹವಿದ್ದು, ಸಮುದಾಯದ ಜನಸಂಖ್ಯೆ ಕೂಡ ಹೆಚ್ಚಿದೆ. ಹೀಗಾಗಿ ನಮ್ಮ ಸಮುದಾಯಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ಕೊಡಿ ಎಂದು ಸಭೆಯಲ್ಲಿ ಪ್ರಸನ್ನಾನಂದಪುರಿ ಸ್ವಾಮೀಜಿ ಪ್ರಸ್ತಾಪ ಮಾಡಿದ್ರು.

ನಮ್ಮ ಸಮುದಾಯಕ್ಕೆ ಒಂದು ಡಿಸಿಎಂ ಹುದ್ದೆ ಕೊಡಬೇಕು. ಜೊತೆಗೆ ವಾಲ್ಮೀಕಿ ಸಮಾಜಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿಯ ಹೆಸರಿಡಬೇಕು ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೊದಲು ಮಹರ್ಷಿ ವಾಲ್ಮೀಕಿಯ ಮಂದಿರ ನಿರ್ಮಾಮಿಸಬೇಕು ಎಂದು ಸಭೆಯಲ್ಲಿ ಬೇಡಿಕೆಗಳನ್ನು ಮುಖಂಡರು ಪ್ರಸ್ತಾಪಿಸಿದರು.

ನಂತರ ವಾಲ್ಮೀಕಿ ಸಮಾಜದ ಮೀಸಲಾತಿಗೆ ಸಂಬಂಧಿಸಿದಂತೆ ರಚಿಸಲಾಗಿರೋ ನ್ಯಾ. ನಾಗಮೋಹನ್ ದಾಸ್ ಕಮಿಟಿಗೆ, ಆದಷ್ಟು ಬೇಗ ವರದಿ ನೀಡುವಂತೆ ನಿರ್ದೇಶನ ನೀಡಬೇಕೆಂದು ಎಲ್ಲಾ ಸ್ವಾಮೀಜಿಯವರು ಹಾಗೂ ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್​ವೈ ಅವರು, ಎಲ್ಲಾ ಇಲಾಖೆಗಳಿಗೆ ನ್ಯಾ. ನಾಗಮೋಹನ್ ದಾಸ್ ಆಯೋಗ ಕೇಳಿದ ಎಲ್ಲಾ ಮಾಹಿತಿ ಮತ್ತು ದಾಖಲೆ ಕೊಡಲು ಆದೇಶಿಸುತ್ತೇನೆ. ನಾಗಮೋಹನ್ ದಾಸ್ ಬೇಡಿಕೆಗೆ ಅನುಗುಣವಾಗಿ ಆರು ತಿಂಗಳ ಸಮಯವನ್ನು ಕೊಟ್ಟಿದ್ದೇವೆ ಎಂದರು. ನ್ಯಾಯಾಧೀಶರು ಬೇಗನೆ ವರದಿ ಕೊಟ್ಟರೆ ಸರ್ಕಾರ ವರದಿಯನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲು ಚಿಂತಿಸುತ್ತದೆ. ಆದಷ್ಟು ಬೇಗ ವರದಿ ಕೊಡಲು ಆಯೋಗಕ್ಕೆ ಸೂಚಿಸುತ್ತೇವೆ. ಸರ್ಕಾರ ಯಾವಾಗಲೂ ವಾಲ್ಮಿಕಿ ಜನಾಂಗದ ಅಭಿವೃದ್ಧಿ ಪರ ನಿಲುವು ಹೊಂದಿದೆ ಎಂದು ಭರವಸೆ ನೀಡಿದ್ರು.

ಸಿಎಂ ಜೊತೆ ಸಭೆ ಬಳಿಕ ಮಾತನಾಡಿದ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ, ನಾಲ್ಕು ದಶಕಗಳ ಬೇಡಿಕೆಗೆ ಇವತ್ತು ಸಕಾರಾತ್ಮಕ ಉತ್ತರ ಸಿಕ್ಕಿದೆ. ಮೀಸಲಾತಿಗೆ ಸಂಬಂಧಿಸಿದಂತೆಯೂ ಸಕಾರಾತ್ಮಕ ಚರ್ಚೆಯಾಗಿದೆ. ಸಿಎಂ ಈ ವಿಚಾರದಲ್ಲಿ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದರು. ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಆಧರಿಸಿ ಸಿಎಂ ಕ್ರಮ ಕೈಗೊಳ್ತಿನಿ ಎಂದಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಬಂದಾಗ ಈ ಬಗ್ಗೆ ಮಾತನಾಡುವೆ ಎಂದಿದ್ದಾರೆ. ಹೀಗಾಗಿ ಸಿಎಂ ಇದನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪ್ರಸನ್ನಾನಂದ ಪುರಿ ಸ್ವಾಮೀಜಿ

ನಮ್ಮ ಸಮುದಾಯದವರಿಗೆ ಡಿಸಿಎಂ ಸ್ಥಾನ ನೀಡಬೇಕು ಎನ್ನುವ ಬೇಡಿಕೆ ಇದೆ. ಆದ್ರೆ ಯಾರಿಗೆ ನೀಡಬೇಕೆಂದು ಹೇಳಲು ಸಾಧ್ಯವಿಲ್ಲ. ಇಂದಿನ ಸಭೆಯಲ್ಲಿ ಡಿಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಸಿಲ್ಲ ಎಂದರು.

ಇನ್ನು ಸಭೆ ಬಳಿಕ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ, ಸಮುದಾಯದ ಬಹುದಿನಗಳ ಬೇಡಿಕೆ ಇದು. ನ್ಯಾ. ನಾಗಮೋಹನ ದಾಸ್ ಅವರು ವರದಿ‌ ಕೊಟ್ಟ ಬಳಿಕ, ಕ್ರಮ ಕೈಗೊಳ್ಳೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು‌. ಡಿಸಿಎಂ ಹುದ್ದೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಸ್ವಾಮೀಜಿಗಳಿಗೆ ಮಾತನಾಡವ ಹಕ್ಕಿದೆ. ಆದರೆ ನಾನು ಕಾಂಗ್ರೆಸ್ ಶಾಸಕ ಹಾಗಾಗಿ ಅದರ ಬಗ್ಗೆ ಮಾತನಾಡಲ್ಲ ಎಂದರು.

ABOUT THE AUTHOR

...view details