ಬೆಂಗಳೂರು: ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳು ಸಭೆ ನಡೆಸುತ್ತಿದ್ದು, ನಿನ್ನೆ ಕೂಡ ಎರಡು ಸಂಘಟನೆಗಳ ಜೊತೆ ಸಭೆ ನಡೆದಿದೆ.
ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ಸಂಘಟನೆಗಳ ಸಭೆ: 6ನೇ ವೇತನ ಆಯೋಗ ಜಾರಿಗೆ ಪಟ್ಟು - 6ನೇ ವೇತನ ಆಯೋಗ ಜಾರಿಗೆ ಪಟ್ಟು
ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಹಿನ್ನೆಲೆ ನಡೆಯುತ್ತಿರುವ ಸಭೆ ಮುಂದುವರಿದಿದ್ದು, ಇಂದಿನ ಸಭೆಯಲ್ಲಿ ನೌಕರರಿಗೆ ಶೇ.20ರಷ್ಟು ವೇತನ ಹೆಚ್ಚಳ, ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಿ ಎಂದು ಎ.ಐ.ಟಿ.ಯು.ಸಿ ಮುಖಂಡ ಆನಂತ ಸುಬ್ಬರಾವ್ ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಸರ್ಕಾರ ಆರನೇ ವೇತನ ಆಯೋಗವನ್ನು ಜಾರಿಗೆ ತರಬೇಕೆಂದು ಪಟ್ಟು ಹಿಡಿದಿದ್ದಾರೆ.
ksrtc
ಈಗ ನಡೆಯುತ್ತಿರುವ ಸಭೆಯಲ್ಲಿ ಮೂರು ಸಂಘಟನೆಗಳ ಜೊತೆ ಮಾತುಕತೆ ಆರಂಭವಾಗಿದ್ದು, ಕೇಂದ್ರ ಕಚೇರಿ ಶಾಂತಿನಗರದಲ್ಲಿ ಸಭೆ ನಡೆಯುತ್ತಿದೆ. ನೌಕರರಿಗೆ ಶೇ.20ರಷ್ಟು ವೇತನ ಹೆಚ್ಚಳ ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಿ ಎಂದು ಎ.ಐ.ಟಿ.ಯು.ಸಿ ಮುಖಂಡ ಅನಂತ ಸುಬ್ಬರಾವ್ ಒತ್ತಾಯಿಸುತ್ತಿದ್ದಾರೆ.
ಸಾರಿಗೆ ನೌಕರರ ಕೂಟ ಮಾತ್ರ 6ನೇ ಆಯೋಗ ಜಾರಿಗೆ ಪಟ್ಟು ಹಿಡಿದಿದ್ದು, ಉಳಿದ ಸಂಘಟನೆಗಳು ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಿ ಎಂದು ಆಗ್ರಹಿಸುತ್ತಿವೆ.