ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆ ತಯಾರಿ ಹಿನ್ನೆಲೆ ವರಿಷ್ಠರ ಜೊತೆ ದೆಹಲಿಯಲ್ಲಿ ಸಭೆ, 50 ಕೈ ನಾಯಕರ ಭೇಟಿ: ಡಿ ಕೆ ಶಿವಕುಮಾರ್​ - ಗ್ಯಾರಂಟಿ ಯೋಜನೆ

D K Shivakumar: ಸಚಿವರು ಮಾತ್ರವಲ್ಲ, ಹಿರಿಯ ಶಾಸಕರನ್ನು ಕೂಡ ದೆಹಲಿ ಸಭೆ ಆಹ್ವಾನಿಸಿದ್ದಾರೆ ಎಂದು ಡಿ ಕೆ ಶಿವಕುಮಾರ್​ ತಿಳಿಸಿದ್ದಾರೆ.

Deputy Chief Minister DK Shivakumar
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​

By

Published : Aug 1, 2023, 1:00 PM IST

Updated : Aug 1, 2023, 5:54 PM IST

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​

ಬೆಂಗಳೂರು:50 ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಹೋಗಿ ವರಿಷ್ಠರ ಜೊತೆ ಸಭೆ ನಡೆಸಲಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ದೆಹಲಿ ಸಭೆ ಖಂಡಿತವಾಗಿಯೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಭೆ. ಪಕ್ಷದ ಹಿತದೃಷ್ಟಿಯಿಂದ ಏನೆಲ್ಲಾ‌‌ ಕೆಲಸ‌ ಮಾಡಬೇಕು. ಲೋಕಸಭೆ ಚುನಾವಣೆಯಲ್ಲಿ ಜವಾಬ್ದಾರಿಗಳನ್ನು ಈಗಿನಿಂದಲೇ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಯಲಿದೆ. ಇದರ ಜೊತೆಗೆ ಗ್ಯಾರಂಟಿ ಯೋಜನೆಗಳು ಜನರಿಗೆ ತಲುತ್ತಾ ಇದೆಯಾ ಎಂಬ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಈ ಸಂಬಂಧ ಕಾರ್ಯತಂತ್ರ ರೂಪಿಸಲಿದ್ದೇವೆ ಎಂದರು.

ಎಂಟು - ಹತ್ತು ಹಿರಿಯ ಕಾಂಗ್ರೆಸ್ ನಾಯಕರು ದೆಹಲಿಗೆ ಬರಲಿದ್ದಾರೆ. ಬರೇ ಸಚಿವರನ್ನು ಮಾತ್ರ ಕರೆದಿಲ್ಲ.‌ ಹಿರಿಯ ಶಾಸಕರು, ಸಂಸದರನ್ನು ಕೂಡ ಕರೆದಿದ್ದಾರೆ. ಒಟ್ಟು 50 ನಾಯಕರು ಮೂರು ವಿಭಾಗಗಳಲ್ಲಿ ತೆರಳಿ ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದರು.

ಗೃಹ ಜ್ಯೋತಿ ಯೋಜನೆ ಜಾರಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಗೃಹ ಜ್ಯೋತಿ ಯೋಜನೆಗೆ ಆಗಸ್ಟ್​ 5ರಂದು ಚಾಲನೆ ನೀಡಲಿದ್ದೇವೆ. ನನಗೂ ಫ್ರೀ ನಿನಗೂ ಫ್ರೀ ಎಂದು ತಿಳಿಸಿದರು. ದೆಹಲಿ ನಾಯಕರ ಬುಲಾವ್ ಹಿನ್ನೆಲೆ ರಾಜ್ಯ ಕೈ ನಾಯಕರ ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಬೆಳೆಸಿದ್ದಾರೆ. ಡಿಸಿಎಂ ಡಿಕೆಶಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಿದ್ದಾರೆ. ಸಿಎಂ, ಡಿಸಿಎಂ ಜೊತೆಗೆ ಹಿರಿಯ ಸಚಿವರು, ಹಿರಿಯ ಕೈ ನಾಯಕರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ವರಿಷ್ಠರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಯಲಿದೆ. ಚುನಾವಣೆ ರಣತಂತ್ರ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಶಾಸಕರ ಅಸಮಾಧಾನದ ಬಗ್ಗೆಯೂ ಚರ್ಚೆಯಾಗಲಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ವಿಪಕ್ಷಗಳ ಮಹಾಮೈತ್ರಿಕೂಟ ಸಭೆ: ಇತ್ತೀಚೆಗೆ ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಬೆಂಗಳೂರಿನಲ್ಲಿ ಸಭೆ ನಡೆಸಿ, ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸುವುದರ ಜೊತೆಗೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದವು. ಹಲವು ರಾಜ್ಯಗಳ ವಿವಿಧ ಪಕ್ಷಗಳ ನಾಯಕರು ಬಿಜೆಪಿ ಹಾಗೂ ನರೇಂದ್ರ ಮೋದಿ ಆಡಳಿತ ಸಸರ್ಕಾರದ ವಿರುದ್ಧ ಮಹಾಘಟಬಂಧನ್​ ಮೂಲಕ ಪೈಪೋಟಿ ಸಾರಿವೆ. ಸಭೆಯಲ್ಲಿ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸುವುದರ ಜೊತೆಗೆ ತಮ್ಮ ಮೈತ್ರಿಕೂಟಕ್ಕೆ ಪ್ರತಿಪಕ್ಷಗಳು ಹೊಸ ಹೆಸರು 'ಇಂಡಿಯಾ' ಎಂದು ಘೋಷಣೆಯನ್ನೂ ಮಾಡಿತ್ತು.

ಇದನ್ನೂ ಓದಿ:ರಾಜ್ಯಾಧ್ಯಕ್ಷ ಹುದ್ದೆಗೆ ರೇಸ್ ಎನ್ನುವಂತಹ ಕಾಂಪಿಟೇಶನ್ ಇಟ್ಟಿಲ್ಲ: ಮಾಜಿ ಶಾಸಕ ಸಿ ಟಿ ರವಿ

Last Updated : Aug 1, 2023, 5:54 PM IST

ABOUT THE AUTHOR

...view details