ಬೆಂಗಳೂರು:ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಿಧಾನಸೌಧದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದರು.
ನೂತನ ಶಿಕ್ಷಣ ಸಚಿವರಿಂದ ಸಭೆ: ಇಲಾಖೆಯ ಪ್ರಗತಿ ಪರಿಶೀಲನೆ - ಶಿಕ್ಷಣ ಸಚಿವ ಸುರೇಶ್ ಕುಮಾರ್
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಪಡೆದ ಸುರೇಶ್ ಕುಮಾರ್ ವಿಧಾನಸೌಧದ ತಮ್ಮ ಚೇಂಬರ್ನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ, ಇಲಾಖೆಯಲ್ಲಿನ ಆಗುಹೋಗುಗಳ ಬಗ್ಗೆ ಸಮಾಲೋಚನೆ ನಡೆಸಿದರು.
ನೂತನ ಶಿಕ್ಷಣ ಸಚಿವರಿಂದ ಸಭೆ
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಪಡೆದ ಸುರೇಶ್ ಕುಮಾರ್ ವಿಧಾನಸೌಧದ ತಮ್ಮ ಚೇಂಬರ್ನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ, ಇಲಾಖೆಯಲ್ಲಿನ ಆಗುಹೋಗುಗಳ ಬಗ್ಗೆ ಸಮಾಲೋಚನೆ ನಡೆಸಿದರು. ಕನ್ನಡ ಶಾಲೆಗಳ ವಿಲೀನ, ಆ ಸಂಬಂಧ ಕನ್ನಡ ಪರ ಹೋರಾಟಗಾರರು, ಚಿಂತಕರಿಂದ ಎದುರಾಗುತ್ತಿರುವ ವಿರೋಧಗಳ ಬಗ್ಗೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಸಂಗ್ರಹಿಸಿದರು.
ಉಳಿದಂತೆ ಶಿಕ್ಷಣ ಇಲಾಖೆಯಲ್ಲಿನ ಯೋಜನೆಗಳು, ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಉಪನ್ಯಾಸಕರ ವೇತನ ಬಾಕಿ, ಶಿಕ್ಷಕರ ಕೊರತೆ ಸೇರಿದಂತೆ ಮುಂತಾದ ಮಹತ್ವದ ವಿಚಾರವಾಗಿ ಸಮಾಲೋಚನೆ ನಡೆಸಿದರು.