ಬೆಂಗಳೂರು:ಹಲವು ಮಂದಿಗೆ ವಂಚಿಸಿದ QNET ಕಂಪನಿ ಮತ್ತೆ ಸಭೆ ನಡೆಸಿದ್ದು, ವಿಷಯ ತಿಳಿದು ವಂಚನೆಗೊಳಗಾದವರು ಪ್ರತಿಭಟನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಹೊಸ ಕಂಪನಿ ತೆರೆಯಲು QNET ಚಿಂತನೆ; ಮೋಸ ಹೋದವ್ರಿಂದ ಪ್ರತಿಭಟನೆ, ಪೊಲೀಸರ ದಾಳಿ - ವಂಚಿಸಿದ್ದ QNET ಕಂಪನಿಯಿಂದ ಮತ್ತೆ ಸಭೆ
ಹಲವು ಮಂದಿಗೆ ವಂಚಿಸಿದ QNET ಕಂಪನಿ ಮತ್ತೆ ಸಭೆ ನಡೆಸಿದ್ದು ಬೆಂಗಳೂರು ಪೊಲೀಸರು ವಿಫಲಗೊಳಿಸಿದ್ದಾರೆ.
ನಗರ ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಕಂಪನಿ ಸಭೆಯನ್ನು ಸ್ಥಗಿತಗೊಳಿಸಿದ್ದಾರೆ. ಯಲಹಂಕದ ರಾಯಲ್ ಆರ್ಕಿಡ್ ಹಾಲ್‌ನಲ್ಲಿ ಸಭೆ ಸೇರಲಾಗಿದೆ. ಈ ಸಭೆಯಲ್ಲಿ ವಿದೇಶದ ಸುಮಾರು 500ಕ್ಕೂ ಹೆಚ್ಚು ಕಂಪನಿಯ ಪದಾಧಿಕಾರಿಗಳು ಭಾಗಿಯಾಗಿದ್ದರು. ಈಗಾಗಲೇ ದೇಶದಲ್ಲಿ QNET ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ನೀಡಿದೆ.
ನೂತನ ಕಂಪನಿ ಹೆಸರಿನಲ್ಲಿ ಮತ್ತೆ ಕಾರ್ಯನಿರ್ವಹಿಸಲು ಈ ಸಭೆ ಕರೆಯಲಾಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಕ್ಯೂನೆಟ್ ಚೈನ್ ಲಿಂಕ್ ಬ್ಯುಸಿನೆಸ್ ಇದಾಗಿದ್ದು ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸಿ ಎಂದು ನಂಬಿಸಿ ದೇಶದಲ್ಲಿ ಹಲವೆಡೆ ಕೋಟ್ಯಂತರ ರೂ ವಂಚಿಸಿರುವ ಆರೋಪ ಕಂಪನಿ ಮೇಲಿದೆ.