ಕರ್ನಾಟಕ

karnataka

ETV Bharat / state

ಅನಾರೋಗ್ಯದ ಬಗ್ಗೆ ತಿಳಿಸದೇ ವಿಮೆ ಮಾಡಿಸಿದಲ್ಲಿ ಮೆಡಿಕ್ಲೈಮ್ ನಿರಾಕರಿಸಬಹುದು: ಹೈಕೋರ್ಟ್ - etv bharat kannada

ಮೆಡಿಕ್ಲೈಮ್ ಪಾಲಿಸಿಯು ಒಂದು ರೀತಿಯ ಒಪ್ಪಂದವಾಗಿದೆ. ವಿಮಾದಾರರು ತಮಗೆ ಪಾಲಿಸಿ ಮಾಡಿಸುವ ಮುನ್ನ ಇದ್ದ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ಪಾಲಿಸಿ ಪಡೆದ ನಂತರ ಮಾಹಿತಿ ಲಭ್ಯವಾದರೆ ಆಗ ಕಂಪನಿಯು ಪಾಲಿಸಿಯನ್ನು ನಿರಾಕರಿಸಿದರೆ ಅದರಲ್ಲಿ ದೋಷ ಹುಡುಕುವುದಕ್ಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್​ ಹೇಳಿದೆ.

mediclaim-can-be-denied-if-insured-does-not-disclose-illness-high-court
ಅನಾರೋಗ್ಯದ ಬಗ್ಗೆ ತಿಳಿಸದೆ ವಿಮೆ ಮಾಡಿಸಿದಲ್ಲಿ ಮೆಡಿಕ್ಲೈಮ್ ನಿರಾಕರಿಸಿಬಹುದು: ಹೈಕೋರ್ಟ್

By

Published : Oct 29, 2022, 7:12 AM IST

ಬೆಂಗಳೂರು:ಅನಾರೋಗ್ಯದ ಕುರಿತು ಮಾಹಿತಿ ಮುಚ್ಚಿಟ್ಟು, ಆರೋಗ್ಯ ವಿಮೆ ಮಾಡಿಸಿದಲ್ಲಿ ಮೆಡಿಕ್ಲೈಮ್​ ಅನ್ನು ನಿರಾಕರಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ. ಬೆಂಗಳೂರಿನ ದಂಪತಿ ವಿಮಾ ಒಂಬುಡ್ಸ್​ಮನ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ವಿಮಾ ಕಂಪನಿ ಒಳ್ಳೆಯ ಉದ್ದೇಶದಿಂದ ಮೆಡಿಕ್ಲೈಮ್ ಪಾಲಿಸಿ ನೀಡುತ್ತದೆ. ಆ ವೇಳೆ ವಿಮಾದಾರರು ತಮಗೆ ಮೊದಲೇ ಇದ್ದ ಅನಾರೋಗ್ಯದ ಕುರಿತು ಮಾಹಿತಿ ನೀಡಬೇಕಾಗಿರುವುದು ಅವರ ಕರ್ತವ್ಯ. ಹಾಗೆ ಮಾಹಿತಿ ನೀಡದೇ ಇದ್ದಾಗ ವಿಮಾ ಕಂಪನಿಯು ಪಾಲಿಸಿಯನ್ನು ನಿರಾಕರಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.

ಮೆಡಿಕ್ಲೈಮ್ ಪಾಲಿಸಿಯು ಒಂದು ರೀತಿಯ ಒಪ್ಪಂದವಾಗಿದ್ದು, ಆ ಒಪ್ಪಂದ ವಿಶ್ವಾಸದ ಜೊತೆಗೆ ಒಳ್ಳೆಯ ಭಾವನೆಯೂ ಇರುತ್ತದೆ. ಆದರೆ ವಿಮಾದಾರರು ತಮಗೆ ಪಾಲಿಸಿ ಮಾಡಿಸುವ ಮುನ್ನ ಇದ್ದ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ಪಾಲಿಸಿ ಪಡೆದ ನಂತರ ಮಾಹಿತಿ ಲಭ್ಯವಾದರೆ ಆಗ ಕಂಪನಿ ಪಾಲಿಸಿ ನಿರಾಕರಿಸಿದರೆ ಅದರಲ್ಲಿ ದೋಷ ಹುಡುಕುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಹಿನ್ನೆಲೆ:ಅರ್ಜಿದಾರರು 2017ರ ಏ.29ರಂದು ಪ್ರಮುಖ ಅನಾರೋಗ್ಯಕ್ಕೆ ವಿಮಾ ಸೌಲಭ್ಯ ಒದಗಿಸುವ ಹೋಮ್ ಸುರಕ್ಷಾ ಪ್ಲಸ್ ಪಾಲಿಸಿ ಮಾಡಿಸಿದ್ದರು. 2020ರ ಆ.10ರಂದು ವಿಕ್ರಮ್ ಆಸ್ಪತ್ರೆಯ ವೈದ್ಯರ ಬಳಿ ಅರ್ಜಿದಾರರು ಮಲ್ಟಿಪಲ್ ಸ್ಕ್ಲೇರೊಸಿಸ್​​ನಿಂದ ಬಳಲುತ್ತಿರುವ ಬಗ್ಗೆ ಚಿಕಿತ್ಸೆ ಪಡೆದಿದ್ದರು. ಆನಂತರ ಚಿಕಿತ್ಸೆ ವೆಚ್ಚ ಮರುಪಾವತಿಗೆ ಹಕ್ಕು ಮಂಡಿಸಿದ್ದರು.

ಆದರೆ ವಿಮಾ ಕಂಪನಿ ಪರಿಶೀಲಿಸಿದಾಗ ಅವರಿಗೆ ಮೊದಲೇ ರೋಗ ಇದ್ದಿದ್ದು ಕಂಡು ಬಂದಿತ್ತು. ಹಾಗಾಗಿ ಕಂಪನಿಯು ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸಿತ್ತು. ದಂಪತಿ ವಿಮಾ ಒಂಬುಡ್ಸ್​​ಮನ್​ಗೆ ದೂರು ನೀಡಿ, ವಿಮಾ ಕಂಪನಿಯಿಂದ 28 ಲಕ್ಷ ರೂ. ಕೊಡಿಸುವಂತೆ ದೂರು ನೀಡಿದ್ದರು. ದಾಖಲೆ ಪರಿಶೀಲಿಸಿದ ಒಂಬುಡ್ಸ್​​ಮನ್ ದಂಪತಿಯ ಮನವಿ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ದಂಪತಿಯು ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ:ಅತ್ಯಾಚಾರ ಪ್ರಕರಣ: ಅಪ್ರಾಪ್ತೆ ಪ್ರಾಪ್ತರಾಗ್ತಿದ್ದಂತೆ ಮದುವೆಯಾಗುವೆ ಎಂದ ಆರೋಪಿಗೆ ಜಾಮೀನು ​

ABOUT THE AUTHOR

...view details