ಕರ್ನಾಟಕ

karnataka

By

Published : Jul 6, 2020, 10:34 PM IST

ETV Bharat / state

ಔಷಧಿ ಖರೀದಿ ಮಾಡಿದ ಜನರ ಮಾಹಿತಿ ನೀಡದ ಮೆಡಿಕಲ್ ಶಾಪ್​ಗಳ ಪರವಾನಗಿ ಅಮಾನತು

ಕೋವಿಡ್-19ಗೆ ಸಂಬಂಧಿಸಿದ ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ILI/SARIಗೆ ಔಷಧ ಖರೀದಿಸಿದವರ ವಿವರವನ್ನು ಫಾರ್ಮಾ ಪೋರ್ಟಲ್​ನಲ್ಲಿ ಭರ್ತಿ ಮಾಡದ ಔಷಧಿ ಅಂಗಡಿಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.

License
ಲೈಸೆನ್ಸ್ ರದ್ದು

ಬೆಂಗಳೂರು : ಕೋವಿಡ್-19ಗೆ ಸಂಬಂಧಿಸಿದ ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ILI/SARI ಗೆ ಔಷಧ ಖರೀದಿಸಿದವರ ವಿವರವನ್ನು ಫಾರ್ಮಾ ಪೋರ್ಟಲ್​ನಲ್ಲಿ ಭರ್ತಿ ಮಾಡದ ರಾಜ್ಯದ ಹಲವೆಡೆಯ ಔಷಧಿ ಅಂಗಡಿಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.

ಮಾಹಿತಿ ನೀಡದ ಮೆಡಿಕಲ್ ಶಾಪ್​ಗಳ ಪರವಾನಗಿ ಅಮಾನತು ಆದೇಶ

ಸರ್ಕಾರವು ಆರೋಗ್ಯ ಅಗತ್ಯತೆಗಳನ್ನು ತಲುಪಿಸಲು ಮತ್ತು ಹೆಚ್ಚಿನ ಅಪಾಯದಲ್ಲಿರುವವರನ್ನು ರಕ್ಷಿಸಲು ಹಾಗೂ ಸಾಂಕ್ರಾಮಿಕ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸಲು ಔಷಧಿ ಅಂಗಡಿಗಳಿಂದ ಖರೀದಿಸಿದ ಮಾಹಿತಿಯು ಮಹತ್ವದ್ದಾಗಿದೆ. ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಇಲಾಖೆಯು ಔಷಧಿ ಖರೀದಿಸುವವರ ಮಾಹಿತಿಯನ್ನು ವೆಬ್​ಗೆ ಹಾಕಲು ತಿಳಿಸಿತ್ತು. ಆದರೆ ಇದರಲ್ಲಿ ವಿಫಲವಾಗಿರುವ 110 ಮೆಡಿಕಲ್ ಶಾಪ್​ಗಳನ್ನು ನಿರ್ದಿಷ್ಟ ಅವಧಿಗೆ ಅಮಾನತು ಮಾಡಲಾಗಿದೆ.

ಕಲಬುರಗಿ- 70
ಬೆಂಗಳೂರು -03
ಬೀದರ್ - 4
ವಿಜಯಪುರ - 15
ಮೈಸೂರು- 4
ರಾಯಚೂರು- 9
ಬಾಗಲಕೋಟೆ- 5

ಒಟ್ಟು 110 ಔಷಧಿ ಅಂಗಡಿಗಳ ಪರವಾನಗಿ ಅಮಾನತು ಮಾಡಲಾಗಿದೆ.

ABOUT THE AUTHOR

...view details