ಬೆಂಗಳೂರು: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಪ್ರತಿಭಟನಾನಿರತ ಐಟಿಐ ಲಿಮಿಟೆಡ್ ಕಾರ್ಮಿಕರಿಕೆ ಬೆಂಬಲ ಸೂಚಿಸಿದ್ದಾರೆ.
ಕಾನೂನುಬಾಹಿರವಾಗಿ ತಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿರುವ ಐಟಿಐ ಕಾರ್ಮಿಕರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮೇಧಾ ಪಾಟ್ಕರ್ ಕಾರ್ಮಿಕರು 45 ದಿನಗಳಿಂದ ಸತತವಾಗಿ ಸೋಲೊಪ್ಪದೆ ಹೋರಾಟ ಮಾಡುತ್ತಿರುವುದಕ್ಕೆ ಅಭಿನಂದಿಸಿದರು. ಜೊತೆಗೆ, ಐಟಿಐ ಸಾರ್ವಜನಿಕ ಉದ್ದಿಮೆ ಕಂಪನಿಯಾಗಿದ್ದು, ಸರ್ಕಾರದ ಖಜಾನೆಯನ್ನು ತುಂಬಿಸಬೇಕು. ಆದರೆ, ಕಾರ್ಮಿಕರ ಶ್ರಮವನ್ನು ಹೀರಿ, ಕಾರ್ಮಿಕರನ್ನು ಶೋಷಣೆಗೆೊಳಪಡಿಸಿ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ: ಸಿಂದಗಿಯಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ
ಸಂಘಟನೆ ಮಾಡುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಈ ಹಕ್ಕನ್ನು ಟ್ರೇಡ್ ಯೂನಿಯನ್ ಕಾಯ್ದೆ, 1926ರಲ್ಲಿ ಖಚಿತಪಡಿಸಲಾಗಿದೆ. ಆದರೆ, ಸಂಘಟನೆ ಮಾಡಿಕೊಂಡ ಈ ಕಾರ್ಮಿಕರನ್ನು ಹೀಗೆ ಹೀನಾಯವಾಗಿ ಕೆಲಸದಿಂದ ವಜಾಗೊಳಿಸಿರುವ ಆಡಳಿತ ಮಂಡಳಿಗೆ ನಾವು ಧಿಕ್ಕಾರ ಕೂಗಲೇ ಬೇಕಾಗುತ್ತದೆ ಎಂದರು.