ಬೆಂಗಳೂರು:ನಗರದ ಬೃಹತ್ ರಸ್ತೆಗಳನ್ನು ಗುಡಿಸಲು ಈಗಾಗಲೇ ಮೆಕ್ಯಾನಿಕಲ್ ಸ್ವೀಪರ್ ಮಷಿನ್ ಖರೀದಿಸಲಾಗಿದೆ. ಆದರೆ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಎಸಿಬಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಈಗಾಗಲೇ ಕಪ್ಪು ಚುಕ್ಕೆ ಹೊಂದಿರುವ ಇದೇ ಟಿಪಿಎಸ್ ಸಂಸ್ಥೆಯಿಂದ ಬಿಬಿಎಂಪಿ ಮತ್ತೆ 17 ವಾಹನಗಳನ್ನು ಕೊಂಡುಕೊಳ್ಳುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
17 ಮೆಕ್ಯಾನಿಕಲ್ ಸ್ವೀಪರ್ ಮೆಷಿನ್ ಖರೀದಿಗೆ ವರ್ಕ್ ಆರ್ಡರ್ ನೀಡಿರುವ ಬಿಬಿಎಂಪಿ ಪ್ರತಿ ಕಿಲೋ ಮೀಟರ್ ಗುಡಿಸಲು 600 ರೂ. ನಿಗದಿ ಮಾಡಲಾಗಿದೆ. ಮೊದಲಿಗಿಂತ 180 ರೂ. ಏರಿಕೆ ಮಾಡಿ, ವರ್ಕ್ ಆರ್ಡರ್ ನೀಡಿರುವುದು ಸರಿಯಲ್ಲ ಎಂದು ವಿಪಕ್ಷ ಟೀಕಿಸಿದೆ. ನಿತ್ಯ ಕನಿಷ್ಠ 40 ಕಿ.ಮೀ ಸ್ವಚ್ಛಗೊಳಿಸಬೇಕೆಂದು ವರ್ಕ್ ಆರ್ಡರ್ ನೀಡಲಾಗಿದೆ.
ಮೇಯರ್ ಗೌತಮ್ ಕುಮಾರ್ ಹೇಳಿಕೆ ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗೌತಮ್ ಕುಮಾರ್, ಈ ಟಿಪಿಎಸ್ ಸಂಸ್ಥೆಯಿಂದ ಹದಿನೇಳು ಯಂತ್ರಗಳ ಖರೀದಿ ವಿಚಾರ ಎರಡು ವರ್ಷದಿಂದಲೂ ಮುಂದೂಡಲ್ಪಟ್ಟಿತ್ತು. ಈಗ ಈ ವಿಚಾರವನ್ನು ಚರ್ಚೆ ಮಾಡಲಾಗಿದೆ. ಟಿಪಿಎಸ್ ಸಂಸ್ಥೆಯವರೇ ಯಂತ್ರಗಳನ್ನು ಖರೀದಿಸಿ ಕೆಲಸ ಮಾಡುತ್ತಾರೆ. ಇದಕ್ಕೆ ಪಾಲಿಕೆ ಬಂಡವಾಳ ಹಾಕುವುದಿಲ್ಲ. ಇದಕ್ಕೆ ಅನುಮೋದನೆ ಸಿಕ್ಕಿದೆ. ಈಗಿರುವ ಮಷಿನರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಉತ್ತಮ ಗುಣಮಟ್ಟದ ಯಂತ್ರಗಳು ಅಗತ್ಯವಿದೆ. ಹಗರಣ ಬೇಡ, ಕೆಲಸ ಮಾಡದ ಮಷಿನರಿಗಳು ಬೇಡ. ಟಿಪಿಎಸ್ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಆದರೆ, ಆ ಕಾಲದಲ್ಲಿ ಖರೀದಿಸಿರುವ ಸ್ವೀಪಿಂಗ್ ಮೆಷಿನ್ ನಮ್ಮ ಹಣದಿಂದ ಖರೀದಿರಿಸಿರುವ ಯಂತ್ರಗಳಾಗಿದ್ದು, ಈಗ ಕೆಲಸ ಮಾಡದೆ ಬೀದಿಯಲ್ಲಿ ನಿಲ್ಲಿಸಲಾಗಿದೆ. ಹೀಗಾಗಿ ಉತ್ತಮ ಗುಣಮಟ್ಟದ ಯಂತ್ರಗಳ ಅಗತ್ಯವಿದ್ದು, ಅದರ ನಿರ್ವಹಣೆಗೆ ಟೆಕ್ನಿಕಲ್ ಇಂಜಿನಿಯರ್ಸ್ ಅಗತ್ಯವಾಗಿದೆ ಎಂದರು.
ಯಾವ ವಲಯದಲ್ಲಿ ಸ್ವೀಪರ್ ಮೆಷಿನ್ ಕೆಲಸ ಮಾಡುತ್ತದೆ, ಅಲ್ಲಿ ಅಧಿಕಾರಿಯೊಬ್ಬರ ನೇಮಕ ಆಗಬೇಕು. ಯಂತ್ರ ಸಂಗ್ರಹಿಸಿದ ಕಸ ಹಾಕಲು ಸೂಕ್ತ ಜಾಗ ಮಾಡಬೇಕು ಎಂದರು.