ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಪಾರ್ಸಿ ಸಮುದಾಯದ ಜನಸಂಖ್ಯೆ ವೃದ್ಧಿಗೆ ಕ್ರಮ: ಶ್ರೀಮಂತ ಪಾಟೀಲ್

ಪಾರ್ಸಿ ಜನಾಂಗದ ಜನಸಂಖ್ಯೆ ಕ್ಷೀಣವಾಗುತ್ತಿದೆ. ಅವರ ಸಮುದಾಯದ ಪ್ರಮಾಣ ಕಡಿಮೆಯಾಗಬಾರದು. ಅವರ ವಂಶ ಉಳಿಯಬೇಕು ಅದಕ್ಕೆ ಏನು ಪ್ರಯತ್ನ ಮಾಡಬೇಕೋ ಮಾಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ಒಂದು ಸಾವಿರದಷ್ಟು ಮಾತ್ರ ಪಾರ್ಸಿ ಜನಾಂಗ ಇದೆ. ಅವರನ್ನು ಯಾವ ರೀತಿ ಉಳಿಸಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತಗೌಡ ಪಾಟೀಲ್ ಹೇಳಿದ್ದಾರೆ.

Measures to increase the population of the Parsi community in the state
ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತಗೌಡ ಪಾಟೀಲ್

By

Published : Feb 18, 2021, 1:30 PM IST

Updated : Feb 18, 2021, 2:00 PM IST

ಬೆಂಗಳೂರು:ರಾಜ್ಯದಲ್ಲಿ ಪಾರ್ಸಿ ಸಮುದಾಯ ಸಂಖ್ಯೆ ಪ್ರತಿ ವರ್ಷವೂ ಕಡಿಮೆಯಾಗುತ್ತಿದ್ದು, ಇದಕ್ಕೆ ಕಾರಣವೇನು ಎನ್ನುವ ಕುರಿತು ವರದಿ ಪಡೆದು ಪಾರ್ಸಿ ಜನಸಂಖ್ಯೆ ವೃದ್ಧಿಗೆ ಉತ್ತೇಜನ ನೀಡಲಾಗುತ್ತದೆ ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತಗೌಡ ಪಾಟೀಲ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾರ್ಸಿ ಜನಾಂಗದ ಜನಸಂಖ್ಯೆ ಕ್ಷೀಣವಾಗುತ್ತಿದೆ. ಅವರ ಸಮುದಾಯದ ಪ್ರಮಾಣ ಕಡಿಮೆಯಾಗಬಾರದು. ಅವರ ವಂಶ ಉಳಿಯಬೇಕು ಅದಕ್ಕೆ ಏನು ಪ್ರಯತ್ನ ಮಾಡಬೇಕೋ ಮಾಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ಒಂದು ಸಾವಿರದಷ್ಟು ಮಾತ್ರ ಪಾರ್ಸಿ ಜನಾಂಗ ಇದೆ. ಅವರನ್ನು ಯಾವ ರೀತಿ ಉಳಿಸಬೇಕು ಎನ್ನುವ ಕುರಿತು ಪ್ರಯತ್ನ ಮಾಡಲಾಗುತ್ತದೆ ಎಂದರು.

ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತಗೌಡ ಪಾಟೀಲ್

ಪಾರ್ಸಿ ಸಮಾಜ ತುಂಬಾ ಚಿಕ್ಕ ಸಮಾಜ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸ್ವಲ್ಪ ಹೆಚ್ಚಿಗೆ ಜನರಿದ್ದಾರೆ. ಆದರೆ, ನಮ್ಮಲ್ಲಿ ಕಡಿಮೆ ಜನಸಂಖ್ಯೆ ಇದೆ. ಅವರ ಸಮಾಜ ದುರ್ಬಲವಾಗುತ್ತಿದ್ದು, ಅವರಿಗೆ ಏನು ಸಹಕಾರ ಮಾಡಿದರೆ ಇದನ್ನು ತಡೆಯಲು ಸಾಧ್ಯ ಎನ್ನುವ ಕುರಿತು ತಜ್ಞರ ಜೊತೆ ಚರ್ಚೆ ನಡೆಸಿ ಅದಕ್ಕೇನು ಪರಿಹಾರ ಕೊಡಬೇಕು ಕೊಡಲಾಗುತ್ತದೆ ಎಂದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ವೈಯಕ್ತಿಕ ಅಭಿಪ್ರಾಯ, ಅವರ ಹೇಳಿಕೆ ಬಗ್ಗೆ ನಾನು ಏನೂ ಹೇಳಲು ಸಾಧ್ಯವಿಲ್ಲ. ಆದರೆ ಈ ಅವಧಿಯ ಕೊನೆವರೆಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸರ್ಕಾರ ಭದ್ರವಾಗಿ ನಡೆಯಲಿದೆ ಎಂದರು.

ಕೇಂದ್ರದ ಬಜೆಟ್​ ಸ್ವಾಗತರ್ಹ: ಮೈನಾರಿಟಿ ಸಲುವಾಗಿ ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಉತ್ತಮ ಅವಕಾಶ ನೀಡಿದೆ. ಉತ್ತಮ‌ ಬಜೆಟ್ ನೀಡಿದ್ದಾರೆ. ಈ ವರ್ಷ ಕೋವಿಡ್ ಮಹಾಮಾರಿ ವಿಶ್ವಕ್ಕೆ ತಟ್ಟಿದೆ. ಕೊರೊನಾದಿಂದ‌ ಎಲ್ಲರಿಗೂ ತೊಂದರೆಯಾಗಿದೆ.ಇಂತಹ ಸಂದರ್ಭದಲ್ಲೂ ನಿರ್ಮಲಾ ಸೀತಾರಾಮನ್ ಉತ್ತಮ ಬಜೆಟ್ ನೀಡಿದ್ದಾರೆ. 4,810 ಕೋಟಿ ಅಲ್ಪಸಂಖ್ಯಾತ ಇಲಾಖೆಗೆ ಬಜೆಟ್ ನೀಡಿದ್ದಾರೆ. ಕಳೆದ ವರ್ಷಕ್ಕಿಂತ ಹೆಚ್ಚು ಬಜೆಟ್ ಮಂಡಿಸಲಾಗಿದೆ. ನಮ್ಮ ಅಲ್ಪ ಸಂಖ್ಯಾತರ ಮೇಲೆ ಅವರು ಒಲವು ತೋರಿದ್ದಾರೆ. ಮೆರಿಟ್ ಸ್ಕಾಲರ್ಶಿಪ್, ಮೌಲಾನ ಸ್ಕಾಲರ್ಶಿಪ್ ಸೇರಿದಂತೆ ಹಲವು ವಿಚಾರದಲ್ಲಿ ಹಣ ಮೀಸಲಿಟ್ಟಿದ್ದಾರೆ. ಜಾಬ್ ಓರಿಯಂಟಲ್ ಸ್ಕಿಲ್ ನೀಡಿದ್ದಾರೆ.

ಅಬ್ ಗ್ರೇಡಿಂಗ್ ಮತ್ತು ಟ್ರೈನಿಂಗ್ ನೀಡಲು ಉಸ್ತಾನ್ ಹೆಸರಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದರಿಂದ ಅನೇಕ ಕೆಲಸಗಳು ಸಿಗಲಿವೆ.ಸ್ಪೆಷಲ್ ಪ್ರೋಗ್ರಾಂ ಫಾರ್ ಮೈನಾರಿಟಿ ಅಡಿಯಲ್ಲಿ ಎಲ್ಲರಿಗೂ ಉದ್ಯೋಗ ಸಿಗಲಿದೆ.ಪಾರ್ಸಿ ಸಮುದಾಯ ಸಂಖ್ಯೆ ಕಡಿಮೆಯಾಗ್ತಿದ್ದು, ಅವರಿಗೂ ಉತ್ತೇಜನ ನೀಡಲಾಗುತ್ತಿದೆ ಎಂದರು.

ಓದಿ:ಅಭಿವೃದ್ಧಿ ಹೆಸರಲ್ಲಿ ತಾರತಮ್ಯ ನಡೆದಿಲ್ಲ: ಸವದಿ ಸ್ಪಷ್ಟನೆ

ನನ್ನ ಇಲಾಖೆ ಬಗ್ಗೆ ನನಗೆ ಗೌರವ. ಎಲ್ಲಿ ನಾವು ನಮ್ಮದು ಅಂತ ಕೆಲಸ ಮಾಡುತ್ತೇವೋ ಅದು ನಮ್ಮದಾಗಲಿದೆ ಎಂದು ಇದೆ. ಮಹಾತ್ಮಗಾಂಧಿ ಹೇಳಿದ್ದಾರೆ ಹಾಗೆಯೇ ನಾನು ನನ್ನದು ಅಂತ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಸಚಿವ ಸ್ಥಾನಕ್ಕೆ ತೃಪ್ತಿಪಟ್ಟಿದ್ದೇನೆ. ಈ ಬಾರಿ ಬಜೆಟ್‌ನಲ್ಲಿ ನಮ್ಮ ಇಲಾಖೆಗೆ ಉತ್ತಮ ಹಣ ನೀಡಲಿದ್ದಾರೆ. ಕಳೆದ ಬಾರಿ 1,050 ಕೋಟಿ ನೀಡಿದ್ದು, ಪರಿಷ್ಕೃತ ಬಜೆಟ್‌ನಲ್ಲಿ ಇನ್ನೂ ಹೆಚ್ಚು ಕೊಟ್ಟಿದ್ದಾರೆ. ಈ ಬಾರಿಯೂ ಹೆಚ್ಚು ಅನುದಾನ ಸಿಗಲಿದೆ ಎಂದರು.‌

ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮುಜಾಮಿಲ್ ಬಾಬು ಮಾತನಾಡಿ, ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಅಲ್ಪ ಸಂಖ್ಯಾತರಿಗೆ ಉತ್ತಮ ಬಜೆಟ್ ನೀಡಿದ್ದಾರೆ. ತ್ರಿಬಲ್ ತಲಾಕ್ ನೀಡೋದಕ್ಕೆ ತಡೆ ಹಾಕುವ ಕಾನೂನು ತಂದಿದ್ದಾರೆ. ಇದರಿಂದ ನಮ್ಮ ಸಮುದಾಯದವರಿಗೆ ಸಹಕಾರವಾಗಿದೆ. ರಾಮಜನ್ಮ ಭೂಮಿ ಕೋರ್ಟ್ ವರದಿ ನಾವು ಗೌರವಿಸಿದ್ದೇವೆ. ಮಂದಿರ, ಮಸೀದಿ ಎರಡಕ್ಕೂ ಜಾಗ ನೀಡಿದ್ದಾರೆ ಎಂದರು.‌

Last Updated : Feb 18, 2021, 2:00 PM IST

ABOUT THE AUTHOR

...view details