ಕರ್ನಾಟಕ

karnataka

ETV Bharat / state

ವರಮಹಾಲಕ್ಷ್ಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ನಟಿ ತಾರಾ... ಅಷ್ಟಕ್ಕೂ ಅವರು ಮಾಡಿದ್ದೇನು? - ಚಂದನವನದ ನಟಿ,

ಚಂದನವನದ ನಟಿಯರು ವರಮಹಾಲಕ್ಷಿ ಹಬ್ಬಕ್ಕೆ ಭರ್ಜರಿಯಾಗಿ ಸಜ್ಜಾಗಿದ್ದು. ನಟಿ, ರಾಜಕಾರಣಿ ತಾರಾ ಅನುರಾಧ ಅವರು ಸಹ ವರಮಹಾಲಕ್ಷ್ಮಿ ಹಬ್ಬವನ್ನು ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಿದ್ದಾರೆ.

ವರಮಹಾಲಕ್ಷ್ಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ನಟಿ ತಾರಾ

By

Published : Aug 9, 2019, 4:54 AM IST

ಬೆಂಗಳೂರು:ವೃದ್ದರು ಹಾಗೂ ಪೌರ ಕಾರ್ಮಿಕರಿಗೆ ಬಾಗಿನ ಅರ್ಪಿಸಿ ವರಮಹಾಲಕ್ಷಿ ಹಬ್ಬ ಆಚರಿಸಿದ ನಟಿ ತಾರಾ ಅನುರಾಧ.

ವರಮಹಾಲಕ್ಷ್ಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ನಟಿ ತಾರಾ

ವರಮಹಾಲಕ್ಷ್ಮಿ ಹಬ್ಬಕ್ಕೆ ಈಡಿ ರಾಜ್ಯ ಸಡಗರದಿಂದ ಸಜ್ಜಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹೆಣ್ಣು ಮಕ್ಕಳು ಹೂವು ಹಣ್ಣು ಬಟ್ಟೆ ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.

ಪೌರ ಕಾರ್ಮಿಕರಿಗೆ ಸೀರೆ ಹಂಚಿ, ಅರಿಶಿನ ಕುಂಕಮ ಹಚ್ಚಿ ಆಚರಣೆ

ಇನ್ನೂ ಚಂದನವನದ ನಟಿಯರು ವರಮಹಾಲಕ್ಷಿ ಹಬ್ಬಕ್ಕೆ ಭರ್ಜರಿಯಾಗಿ ಸಜ್ಜಾಗಿದ್ದು. ನಟಿ, ರಾಜಕಾರಣಿ ತಾರಾ ಅನುರಾಧ ಅವರು ಸಹ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಅಲ್ಲದೆ ಅವರು ಈ ಬಾರಿಯ ವರಮಹಾಲಕ್ಷಿ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸಿದ್ದಾರೆ.

ಪೌರ ಕಾರ್ಮಿಕರಿಂದ ಅರಿಶಿನ ಕುಂಕುಮ ಹಚ್ಚಿಸಿಕೊಂಡು ಅರ್ಥಪೂರ್ಣವಾಗಿ ಹಬ್ಬ ಆಚರಿಸಿದ ತಾರ

ಹೌದು, ಈ ಬಾರಿಯ ಲಕ್ಷ್ಮಿ ಹಬ್ಬವನ್ನು ತಾರಾ ಅವರು ಕಾಕ್ಸ್ ಟೌನ್ ಬಳಿಯ ಭಾರತಿ ನಗರದ ಗಣೇಶ ದೇವಾಲಯದ ಬಳಿಯ ವೃದ್ದಾಶ್ರಮದಲ್ಲಿರುವ ಸುಮಾರು ಐವತ್ತಕ್ಕೂ ಹೆಚ್ಚಿನ ಬಡ ವಯೋವೃದ್ದರು , ಹೆಣ್ಣು ಮಕ್ಕಳಿಗೆ ಹಾಗೂ ಪೌರ ಕಾರ್ಮಿಕರಿಗೆ ಸೀರೆ ಹಂಚಿದ್ದಾರೆ. ಅಲ್ಲದೇ ಅರಿಶಿನ ಕುಂಕಮ ಹಚ್ಚಿ, ತಾವು ಕೂಡ ಪೌರ ಕಾರ್ಮಿಕರಿಂದ ಅರಿಶಿನ ಕುಂಕುಮ ಹಚ್ಚಿಸಿಕೊಂಡು ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಿದ್ದಾರೆ.

ABOUT THE AUTHOR

...view details