ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಮತ್ತಿಬ್ಬರು ಡ್ರಗ್​ ಫೆಡ್ಲರ್​ಗಳ ಬಂಧನ : ₹35 ಲಕ್ಷ ಮೌಲ್ಯದ ಎಂಡಿಎಂಎ ಮಾತ್ರೆ ಸೀಜ್​ - ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್​ ಠಾಣೆ

ಇಬ್ಬರೂ ಸೇರಿ ಡ್ರಗ್ಸ್ ವ್ಯವಹಾರ ಪ್ರಾರಂಭಿಸಿದ್ದರು. ಆರೋಪಿಗಳಿಂದ 35 ಲಕ್ಷ ಮೌಲ್ಯದ 350 ಗ್ರಾ ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆದಿದೆ ಅಧಿಕಾರಿಗಳ ತಂಡ..

MDMA pill siege  in bangluru
ಎಂಡಿಎಂಎ ಮಾತ್ರೆ ಸೀಜ್​

By

Published : Mar 19, 2021, 7:29 PM IST

ಬೆಂಗಳೂರು: ದಿನಕ್ಕೊಬ್ಬರ ಲೆಕ್ಕದಂತೆ ವಿದೇಶಿ ಡ್ರಗ್ ದಂಧೆಕೋರರನ್ನು ಖೆಡ್ಡಾಗೆ ಕೆಡವುತ್ತಿರುವ ನಗರ ಪೊಲೀಸರು ಮಾದಕ‌ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರ ಹೆಡೆಮುರಿಕಟ್ಟಿದ್ದಾರೆ.

ಒಕೋರೋ ಕ್ರಿಶ್ಚಿಯಾನಾ ಇಫೆನಿ ಮತ್ತು ರೋಹಿತ್ ಕ್ರಿಸ್ಟೊಫರ್ ಬಂಧಿತ ಆರೋಪಿಗಳು. ಒಕೋರೋ 2018ರಲ್ಲಿ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ನೈಜೀರಿಯನ್ ಪ್ರಜೆಯಾಗಿದ್ದಾನೆ. ಕೊರಿಯರ್ ಮುಖಾಂತರ ಒಕೋರೋ ನಿಷೇಧಿತ ಎಂಡಿಎಂಎ ಮಾತ್ರೆ ತರಿಸಿ ಮಾರಾಟ ಮಾಡುತ್ತಿದ್ದ.

ಈತನಿಗೆ ಶೂಟರ್ಸ್ ಎಂಬ ಪುಟ್​ಬಾಲ್ ಅಕಾಡೆಮಿಯಲ್ಲಿ ಮತ್ತೊಬ್ಬ ಆರೋಪಿ ರೋಹಿತ್ ಪರಿಚಯವಾಗಿದ್ದಾನೆ. ಇಬ್ಬರೂ ಸೇರಿ ಡ್ರಗ್ಸ್ ವ್ಯವಹಾರ ಪ್ರಾರಂಭಿಸಿದ್ದರು. ಆರೋಪಿಗಳಿಂದ 35 ಲಕ್ಷ ಮೌಲ್ಯದ 350 ಗ್ರಾ ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆದಿದೆ ಅಧಿಕಾರಿಗಳ ತಂಡ. ಕಮರ್ಷಿಯಲ್ ಸ್ಟ್ರೀಟ್‌ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನೆಡಸುತ್ತಿದ್ದಾರೆ.

ABOUT THE AUTHOR

...view details