ಕರ್ನಾಟಕ

karnataka

ETV Bharat / state

ಖರ್ಗೆ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡಿದ್ದ ಜಾಧವ್ ಕೊನೆಗೆ ಮಾಡಿದ್ದೇನು: ಎಂ.ಬಿ.ಪಾಟೀಲ್ - undefined

ಉಮೇಶ್ ಜಾಧವ್ ಅವರು ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಕುಟುಂಬ ರಾಜಕಾರಣದ ಆರೋಪ ಮಾಡಿ, ಈಗ ತಮ್ಮ ಮಗನನ್ನು ಚುನಾವಣೆ ನಿಲ್ಲಿಸಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ವಾ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.

ಎಂ.ಬಿ.ಪಾಟೀಲ್

By

Published : May 9, 2019, 7:56 PM IST

ಬೆಂಗಳೂರು: ಉಮೇಶ್ ಜಾಧವ್ ಅವರು ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಕುಟುಂಬ ರಾಜಕಾರಣದ ಆರೋಪ ಮಾಡಿ ಈಗ ತಮ್ಮ ಪುತ್ರನನ್ನ ನಿಲ್ಲಿಸಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಅಲ್ಲಿ‌ ಸ್ಫರ್ಧಿಸಲು ಬಿಜೆಪಿ ಕಾರ್ಯಕರ್ತರು ಇರಲಿಲ್ವಾ. ಇವರ ಮಗನಿಗೆ ಟಿಕೆಟ್ ನೀಡಬೇಕಿತ್ತ. ಇವರ ನಿಜಬಣ್ಣ ಜನರಿಗೆ ಗೊತ್ತಿದೆ. ಅಲ್ಲಿನ ಜನ ಏನು ಮಾಡಬೇಕೆಂದು ತೀರ್ಮಾನಿಸುತ್ತಾರೆ.

ಎಂ.ಬಿ.ಪಾಟೀಲ್

ಉಪ ಚುನಾವಣೆ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆದಿದೆ. ಕುಂದಗೋಳದಲ್ಲಿ ದಿನೇಶ್, ಸತೀಶ್ ನೇತೃತ್ವವಿದೆ. ಚಿಂಚೋಳಿಯಲ್ಲಿ ಖರ್ಗೆಯವರ ನೇತೃತ್ವವಿದೆ. ನಾನು, ಡಿಸಿಎಂ, ಖಂಡ್ರೆ, ಪ್ರಿಯಾಂಕ್ ಎಲ್ಲರೂ ಪ್ರಚಾರ ನಡೆಸಿದ್ದೇವೆ. ಕುಂದಗೋಳದಲ್ಲೂ ಎಲ್ಲರೂ ಪ್ರಚಾರ ಮಾಡ್ತಿದ್ದೇವೆ. ಗುಂಡ್ಲುಪೇಟೆ, ನಂಜನಗೂಡು ಬೈ ಎಲೆಕ್ಷನ್ ಮಾಡಿದ್ದೆವು. ಉತ್ತಮವಾಗಿ ಗೆದ್ದಿದ್ದೆವು. ಅದನ್ನೇ ಗಮನದಲ್ಲಿಟ್ಟುಕೊಂಡು ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ಕುಂದಗೋಳದಲ್ಲಿ ಶಿವಳ್ಳಿ ಅಕಾಲಿಕ ಮರಣಕ್ಕೀಡಾದರು. ಚಿಂಚೋಳಿಯಲ್ಲಿ ಜಾಧವ್ ಸ್ವಯಂ ಕೃತಾಪರಾಧ ಮಾಡಿಕೊಂಡಿದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಎರಡೂ ಕ್ಷೇತ್ರಗಳನ್ನ ನಾವು ಗೆಲ್ಲುತ್ತೇವೆ ಎಂದರು.

ಹಡಗಿನ ವಿಚಾರ:
ತ್ರಿವರ್ಣ ಧ್ವಜ ಹಡುಗಿನ ಅವಷೇಶಗಳು ದೊರೆತ ವಿಚಾರ ಮಾತನಾಡಿ, ಆ ಹಡಗಿನಲ್ಲಿದ್ದ ಮೀನುಗಾರರ ಬಗ್ಗೆ ಇನ್ನೂ ಸುಳಿವು ಸಿಕ್ಕಲ್ಲ. ನೌಕಾಪಡೆಯ ಹಡಗು ಹೊಡೆದ ಪರಿಣಾಮ ಈ ಹಡಗು ಹಾಳಾಗಿದೆಯ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನ ಆಗ್ತಿದೆ. ಎರಡು ದಿನದಲ್ಲಿ ನೌಕಾಪಡೆ ಮುಖ್ಯಸ್ಥರಿಗೆ ಪತ್ರ ಬರೆದು ಸ್ಪಷ್ಟನೆ ಬಯಸುತ್ತೇವೆ. ಘಟನೆ ಬಗ್ಗೆ ಅವರು ಕಾರಣ ಕೊಡಬೇಕಾಗುತ್ತೆ ಎಂದರು.

ಸರ್ಕಾರ ಸುಭದ್ರ: ಸತೀಶ್ ಜಾರಕಿಹೊಳಿ
ಬಳಿಕ ಸತೀಶ್ ಜಾರಕಿಹೊಳಿ ಮಾತನಾಡಿ ಸಚಿವ ಡಿಕೆ ಶಿವಕುಮಾರ್​ ಪ್ರಚಾರದ ವೇಳೆ ಕಣ್ಣೀರು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಶಿವಳ್ಳಿ ಹಾಗೂ ಡಿಕೆ ಶಿವಕುಮಾರ್ ಬಹಳ ಆತ್ಮೀಯರಾಗಿದ್ರು. ಅದನ್ನ ಶಿವಕುಮಾರ ಕೂಡ ಸಾಕಷ್ಟು ಬಾರಿ ಹೇಳಿ ಕೊಂಡಿದ್ದಾರೆ. ಹೀಗಾಗಿ ಆತ್ಮೀಯತೆಯಿಂದಾಗಿ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.

ಪೂರ್ವಾಭಾವಿ ಚರ್ಚೆ:

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಚಿಂಚೋಳಿ, ಕುಂದಗೋಳ ಎರಡು ಉಪಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರ ಜೊತೆ ಪೂರ್ವಾಭಾವಿ ಚರ್ಚೆ ಮಾಡಿದ್ವಿ. ನಿನ್ನೆ ಸಿಎಂ, ಡಿಸಿಎಂ ಜೊತೆ ಕೂಡ ಚರ್ಚೆ ಮಾಡಿದ್ವಿ. ಚುನಾವಣೆ ಎದುರಿಸುವ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆದಿದೆ. ಯಾರ್ಯಾರಿಗೆ ಜವಾಬ್ದಾರಿ ನೀಡಿದ್ದೆವೋ ಅವರೆಲ್ಲ ನಾಳೆ ಕ್ಷೇತ್ರಗಳಿಗೆ ತೆರಳಲಿದ್ದಾರೆ ಎಂದರು.

ಶಿವಳ್ಳಿ ವಿಚಾರವಾಗಿ ಡಿಕೆಶಿ ಕಣ್ಣೀರು ವಿಚಾರ ಮಾತನಾಡಿ, ಭಾವುಕರಾಗಿ ಆ ರೀತಿ ಮಾಡಿದ್ದಾರೆ. ಸಿಎಸ್ ಶಿವಳ್ಳಿ ಒಳ್ಳೆಯ ನಾಯಕರಾಗಿದ್ರು. ಸರಳ ಸಜ್ಜನಿಕೆಯ ನಾಯಕ ಶಿವಳ್ಳಿ, ಡಿಕೆಶಿವಕುಮಾರ್ ಬಹಳ ಆತ್ಮೀಯ ವಾಗಿದ್ದರು. ಕೆಸಿಪಿಯಿಂದ ಶಿವಳ್ಳಿ ಕಾಂಗ್ರೆಸ್​ಗೆ ಬರಲು ಡಿಕೆ ಶಿವಕುಮಾರ್ ಕೂಡ ಕಾರಣ. ಯಾರ್ಯಾರು ಏನೇನು ತಪ್ಪು ಮಾಡಿದ್ದಾರೆ ಅನ್ನೋದು 23ರ ಬಳಿಕ ಗೊತ್ತಾಗುತ್ತೆ. ಆಮೇಲೆ ಏನೇನು ಮಾಡಬೇಕೋ ಮಾಡ್ತೀವಿ ಎಂದರು.

For All Latest Updates

TAGGED:

ABOUT THE AUTHOR

...view details