ಕರ್ನಾಟಕ

karnataka

ETV Bharat / state

ತೋಂಟದಾರ್ಯ ಶ್ರೀಗಳನ್ನು ಭೇಟಿ ಮಾಡಿದ ಎಂ ಬಿ ಪಾಟೀಲ್, ಹೆಬ್ಬಾಳ್ಕರ್ : ರಾಜಕೀಯ ವಲಯದಲ್ಲಿ ಭಾರೀ ಚರ್ಚೆ - belguam latest news

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಆಗಮಿಸಿದ ಎಂ ಬಿ ಪಾಟೀಲ ಅವರು ಶಿವಬಸವ ಸ್ವಾಮೀಜಿ ಅವರ ಗದ್ದುಗೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನು, ಶ್ರೀಮಠಕ್ಕೆ ಇದೇ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಆಗಮಿಸಿದ್ದಾರೆ..

ತೋಂಟದಾರ್ಯ ಶ್ರೀಗಳನ್ನು  ‌ಭೇಟಿ ಮಾಡಿದ ಎಂ ಬಿ ಪಾಟೀಲ್
ತೋಂಟದಾರ್ಯ ಶ್ರೀಗಳನ್ನು ‌ಭೇಟಿ ಮಾಡಿದ ಎಂ ಬಿ ಪಾಟೀಲ್

By

Published : Jul 16, 2021, 3:30 PM IST

Updated : Jul 16, 2021, 4:01 PM IST

ಬೆಳಗಾವಿ: ಗದಗಿನ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಅವರು ಮಾಜಿ ಸಚಿವ ಎಂ ಬಿ ಪಾಟೀಲರನ್ನ ದಿಢೀರ್ ಆಗಿ ಭೇಟಿಯಾಗಿ ಕೆಲ ಹೊತ್ತು ಚರ್ಚಿಸಿದರು. ಇದೇ ವೇಳೆಗೆ ಸ್ವಾಮೀಜಿ ಭೇಟಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಆಗಮಿಸಿದ್ದರಿಂದಾಗಿ ಭಾರೀ ಕುತೂಹಲ ಮೂಡಿಸಿದೆ.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಆಗಮಿಸಿದ ಎಂ ಬಿ ಪಾಟೀಲ ಅವರು, ಮೊದಲು ಲಿಂ. ಶಿವಬಸವ ಸ್ವಾಮೀಜಿ ಅವರ ಗದ್ದುಗೆ ಇದ್ದ ಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಸ್ಥಳೀಯ ‌ಲಿಂಗಾಯತ ಸಮಾಜದ ಮುಖಂಡರಿಂದ ಸನ್ಮಾನ ‌ಸ್ವೀಕರಿಸಿದ್ದಾರೆ.

ತೋಂಟದಾರ್ಯ ಶ್ರೀಗಳನ್ನು ಭೇಟಿ ಮಾಡಿದ ಎಂ ಬಿ ಪಾಟೀಲ್, ಹೆಬ್ಬಾಳ್ಕರ್

ಬಳಿಕ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಭೇಟಿಯಾಗಿ ಕೆಲಹೊತ್ತು ಗೌಪ್ಯ ಮಾತುಕತೆ ನಡೆಸಿದರು. ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಸ್ಥಳೀಯ ಮುಖಂಡರನ್ನು ಹೊರಗೆ ಕಳಿಸಿ ಡಾ. ಸಿದ್ಧರಾಮ ಸ್ವಾಮೀಜಿ ಹಾಗೂ ಎಂ ಬಿ ಪಾಟೀಲ ಮಾತುಕತೆ ನಡೆಸಿರೋದು ಅಚ್ಚರಿಗೆ ಕಾರಣವಾಯಿತು.

ಸಚಿವ ಎಂ ಬಿ ಪಾಟೀಲ್‌ ಬೆನ್ನಲ್ಲೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ‌.

Last Updated : Jul 16, 2021, 4:01 PM IST

ABOUT THE AUTHOR

...view details