ಬೆಂಗಳೂರು:ನಗರದಲ್ಲಿ ಪ್ಲಾಸ್ಟಿಕ್ ನಿಷೇಧ, ನೀರಿನ ಮರುಬಳಕೆ ಸೇರಿದಂತೆ ಪಿಒಪಿ ಗಣೇಶ ಬಳಸದಂತೆ ಸಾರ್ವಜನಿಕರಿಗೆ ಮಕ್ಕಳ ಮೂಲಕ ತಿಳಿಹೇಳಲು ಪಾಲಿಕೆ ಮುಂದಾಗಿದೆ. ಈ ಬಗ್ಗೆ ಪ್ರತೀ ವಲಯದಲ್ಲಿ ನಾಲ್ಕನೇ ಶನಿವಾರ ಜಾಥಾ ನಡೆಸಲು ಪಾಲಿಕೆ ತೀರ್ಮಾನಿಸಿದ್ದು, ಇಂದು ಪಶ್ಚಿಮ ವಲಯದ ಶಾಲಾ ಮುಖ್ಯಸ್ಥರಿಗೆ ಮಲ್ಲೇಶ್ವರಂ ಐಪಿಪಿ ಸೆಂಟರ್ನಲ್ಲಿ ಸಭೆ ನಡೆಸಲಾಯಿತು.
ಶಾಲಾ ಮಕ್ಕಳ ಮೂಲಕ ಜನರಿಗೆ ಪಾಠ ಕಲಿಸಲು ಮುಂದಾದ ಬಿಬಿಎಂಪಿ
ನಗರದಲ್ಲಿ ಪ್ಲಾಸ್ಟಿಕ್ ನಿಷೇಧ, ನೀರಿನ ಮರುಬಳಕೆ ಸೇರಿದಂತೆ ಪಿಒಪಿ ಗಣೇಶ ಬಳಸದಂತೆ ಸಾರ್ವಜನಿಕರಿಗೆ ಮಕ್ಕಳ ಮೂಲಕ ತಿಳಿಹೇಳಲು ಪಾಲಿಕೆ ಮುಂದಾಗಿದೆ.
ಸಭೆಯಲ್ಲಿ ಶಿಕ್ಷಕರು ತಮ್ಮ ಶಾಲೆಗಳ ಸುತ್ತ ಕಸದ ಸಮಸ್ಯೆ, ಮಳೆ ನೀರು ಕೊಯ್ಲು ಅಳವಡಿಸಲು ಇರುವ ಅನುದಾನದ ಕೊರತೆ ಬಗ್ಗೆ ಮೇಯರ್ ಗಂಗಾಂಬಿಕೆ ಗಮನಕ್ಕೆ ತಂದರು. ಸ್ಕೂಲ್ ಮುಂದೆಯೇ ಕಸ ಹಾಕಿದ್ರೂ ಬಿಬಿಎಂಪಿ ಅಧಿಕಾರಿಗಳು ಡೋಂಟ್ ಕೇರ್ ಅಂತಾರೆ ಎಂದು ಶಿಕ್ಷಕರು ದೂರು ಹೇಳಿದ್ರು. ಅಲ್ಲದೆ ಪ್ಲಾಸ್ಟಿಕ್ ಬ್ಯಾನ್, ಪಿಒಪಿ ಗಣೇಶ ಕೂರಿಸಬೇಡಿ ಎಂದು ಹೇಳುವ ಮೊದಲು ಉತ್ಪಾದನೆ ಮಾಡುವಲ್ಲೇ ಸೀಜ್ ಮಾಡಬೇಕು, ದಂಡ ಹಾಕಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗಂಗಾಂಬಿಕೆ, ಪಿಒಪಿ ಗಣೇಶ ಕೂರಿಸಿದ್ರೆ ಜನಪ್ರತಿನಿಧಿಗಳೂ ಪೂಜೆಗೆ ಹೋಗೋದಿಲ್ಲ. ಡೊನೇಶನ್ ಕೂಡಾ ಕೊಡದಿರಲು ತೀರ್ಮಾನಿಸಲಾಗಿದೆ ಎಂದರು.