ಕರ್ನಾಟಕ

karnataka

ETV Bharat / state

'3ನೇ ಹಂತದ ವ್ಯಾಕ್ಸಿನೇಷನ್ ಬಗ್ಗೆ ಅಂತಿಮ ಮಾರ್ಗಸೂಚಿ ಬಂದಿಲ್ಲ' - ಬಿಬಿಎಂಪಿ ಆಯುಕ್ತ

ಕೇರಳ, ಮಹಾರಾಷ್ಟ್ರದಿಂದ ಬರುತ್ತಿರುವ ವಿದ್ಯಾರ್ಥಿಗಳಿರುವ ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಂಡಮ್ ಕೋವಿಡ್ ಟೆಸ್ಟ್ ಮಾಡಲಾಗ್ತಿದೆ. ಅದರಿಂದಲೇ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ನಿನ್ನೆ ಯಲಹಂಕದಲ್ಲಿ 3 ಕಡೆ ಕ್ಲಸ್ಟರ್ ಬಂದಿದೆ ಎಂದಿದ್ದಾರೆ.

mayor-manjunath
ಆಯುಕ್ತ ಮಂಜುನಾಥ್ ಪ್ರಸಾದ್

By

Published : Feb 27, 2021, 4:51 PM IST

Updated : Feb 27, 2021, 5:04 PM IST

ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ಹಂತದ ಕೋವಿಡ್ ವ್ಯಾಕ್ಸಿನೇಷನ್ ಚಾಲ್ತಿಯಲ್ಲಿದ್ದು, 3ನೇ ಹಂತದ ವ್ಯಾಕ್ಸಿನೇಷನ್​​​ಗೂ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಪಾಲಿಕೆ ವ್ಯಾಪ್ತಿಯಲ್ಲಿ 60 ವರ್ಷ ಮೇಲ್ಪಟ್ಟ ಕೊಮೊರ್ಬಿಡಿಟೀಸ್ ಇರುವ ಜನರನ್ನು ಪಟ್ಟಿ ಮಾಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಆಯುಕ್ತ ಮಂಜುನಾಥ ಪ್ರಸಾದ್, ಕೇಂದ್ರ ಸರ್ಕಾರ ಕೋವಿಡ್ ಪೋರ್ಟಲ್ ಚೇಂಜ್ ಮಾಡ್ತಿದೆ. 3ನೇ ಹಂತದ ವ್ಯಾಕ್ಸಿನ್​ಗೆ ಇನ್ನೂ ವಿವರವಾದ ಗೈಡ್‌ಲೈನ್ಸ್ ಬಂದಿಲ್ಲ. ಏನೇನು ಗೈಡ್​​ಲೈನ್ಸ್ ಕೊಡ್ತಾರೆ ಅದರ ಪ್ರಕಾರ ಕ್ರಮ ವಹಿಸುತ್ತೇವೆ. ಇವತ್ತು ಬರುವ ಸಾಧ್ಯತೆ ಇದೆ ಎಂದರು.

'3ನೇ ಹಂತದ ವ್ಯಾಕ್ಸಿನೇಷನ್ ಬಗ್ಗೆ ಅಂತಿಮ ಮಾರ್ಗಸೂಚಿ ಬಂದಿಲ್ಲ'

ಇನ್ನು ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ಹಾಗೂ ಕೇರಳ, ಮಹಾರಾಷ್ಟ್ರದಿಂದ ಬರುತ್ತಿರುವ ವಿದ್ಯಾರ್ಥಿಗಳಿರುವ ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಂಡಮ್ ಕೋವಿಡ್ ಟೆಸ್ಟ್ ಮಾಡಲಾಗ್ತಿದೆ. ಅದರಿಂದಲೇ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ನಿನ್ನೆ ಯಲಹಂಕದಲ್ಲಿ 3 ಕಡೆ ಕ್ಲಸ್ಟರ್ ಬಂದಿದೆ. ಹೋಟೆಲ್, ರೆಸ್ಟೋರೆಂಟ್, ಮದುವೆ ಛತ್ರಗಳಲ್ಲಿ ಅಡುಗೆ ಮಾಡುವವರರ ಕೋವಿಡ್ ಟೆಸ್ಟಿಂಗ್ ಮಾಡಲು ಸೂಚಿಸಲಾಗಿದೆ. ‌15 ದಿನಕ್ಕೊಮ್ಮೆ ಆರ್​​​ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು ಎಂದು ನಿನ್ನೆ ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ:ಪೊಲೀಸರ ವಶದಲ್ಲಿದ್ದ ಆರೋಪಿ ಆತ್ಮಹತ್ಯೆ ಕೇಸ್.. ಸಬ್​ಇನ್ಸ್​ಪೆಕ್ಟರ್ ಸಸ್ಪೆಂಡ್

Last Updated : Feb 27, 2021, 5:04 PM IST

ABOUT THE AUTHOR

...view details