ಬೆಂಗಳೂರು: ರಸ್ತೆ, ಕುಡಿಯುವ ನೀರು, ಒಳಚರಂಡಿ ಕಾಮಗಾರಿಗಳನ್ನು ವೇಗವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕೆ ಸೂಚಿಸಿದ್ದಾರೆ. ಕೆ.ಆರ್ ಪುರಂನ ಹೊರಮಾವು ವಾರ್ಡ್‌ನಲ್ಲಿರುವ ಪಾಲಿಕೆ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಳೆದೊಂದು ವಾರದ ಹಿಂದೆ ಹೊರಮಾವು ವಾರ್ಡ್ನಲ್ಲಿ ಬರುವ ಜಯಂತಿನಗರ, ಕಲ್ಕೆರೆ ರಸ್ತೆ, ಹೊರಮಾವು ಮುಖ್ಯರಸ್ತೆಗಳು ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ರು. ಇದೇ ವಿಷಯವಾಗಿ ಹೊರಮಾವು ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು.