ಕರ್ನಾಟಕ

karnataka

ETV Bharat / state

ಚಾಲುಕ್ಯ ವೃತ್ತದ ಬಸವಣ್ಣ ಪುತ್ಥಳಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಮೇಯರ್..

ನಗರದ ಚಾಲುಕ್ಯ ಸರ್ಕಲ್​ನಲ್ಲಿ ನಡೆಯುತ್ತಿರುವ ಬಣವಣ್ಣ ಪುತ್ಥಳಿ ಹಾಗೂ ಅನುಭವ ಮಂಟಪ ಕಾಮಗಾರಿ ಪ್ರಗತಿಯನ್ನು ಮೇಯರ್ ಎಂ. ಗೌತಮ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ.

By

Published : Dec 16, 2019, 9:43 PM IST

Mayor
ಮೇಯರ್ ಎಂ. ಗೌತಮ್ ಕುಮಾರ್

ಬೆಂಗಳೂರು:ನಗರದ ಚಾಲುಕ್ಯ ಸರ್ಕಲ್​ನಲ್ಲಿ ನಡೆಯುತ್ತಿರುವ ಬಣವಣ್ಣ ಪುತ್ಥಳಿ ಹಾಗೂ ಅನುಭವ ಮಂಟಪ ಕಾಮಗಾರಿ ಪ್ರಗತಿಯನ್ನು ಮೇಯರ್ ಎಂ.ಗೌತಮ್ ಕುಮಾರ್ ಜೈನ್ ಪರಿಶೀಲನೆ ನಡೆಸಿದರು.

ಮಾಜಿ ಮೇಯರ್ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಈಟಿವಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಹಳೇ ಕಾಮಗಾರಿಯನ್ನು ಇಂದು ಮೇಯರ್ ಪರಿಶೀಲಿಸಿದರು.

ಪಾಲಿಕೆ ಅಧಿಕಾರಿಗಳ ಜೊತೆ ವಾಸ್ತುಶಿಲ್ಪಿಗಳು ಹಾಗೂ ಬಸವ ಸಮಿತಿಯ ಪದಾಧಿಕಾರಿಗಳು ಕೂಡಾ ಭಾಗಿಯಾಗಿದ್ದರು. ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನಗರ ಕೇಂದ್ರ ಭಾಗದ ಚಾಲುಕ್ಯ ವೃತ್ತದಲ್ಲಿರುವ ಅಶ್ವಾರೂಢ ಬಸವಣ್ಣನವರ ಪ್ರತಿಮೆಯ ಸುತ್ತಲು ಅನುಭವ ಮಂಟಪ ಪರಿಕಲ್ಪನೆ ವಿನ್ಯಾಸಗೊಳಿಸಲಾಗ್ತಿದೆ. ಮಾರ್ಚ್ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

12ನೇ ಶತಮಾನದ ವಚನ ಸಾಹಿತ್ಯ ಮತ್ತು ಅನುಭವ ಮಂಟಪ ಪರಿಕಲ್ಪನೆಯಡಿ ಪಾಲಿಕೆ ವತಿಯಿಂದ 1ಕೋಟಿ ರೂ. ವೆಚ್ಚದಲ್ಲಿ ಮರುವಿನ್ಯಾಸ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಪ್ರತಿಮೆ ಹಿಂಭಾಗದಲ್ಲಿ ಅರ್ಧ ಚಂದ್ರಾಕೃತಿಯ ಬೃಹತ್ ಗೋಡೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದ್ದು, ವಚನಗಳ ಕೆತ್ತನೆ, ಅಲಂಕಾರಿಕ ವಿದ್ಯುತ್ ದೀಪ, ಕಿರು ಉದ್ಯಾನದ ಕಾಮಗಾರಿ ಪ್ರಗತಿಯಲ್ಲಿದೆ.

ABOUT THE AUTHOR

...view details