ಬೆಂಗಳೂರು:ಬಿಬಿಎಂಪಿ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತೆ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಅಧಿಕಾರದ ಅವಧಿಯಲ್ಲಿ ಕರೆದ ಕಸದ ಟೆಂಡರ್ಅನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಆರೋಪಿಸಿ ಗದ್ದಲ ಆರಂಭಿಸಿದರು.
ಇನ್ನು ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿರುವ ವೈಟ್ ಟಾಪಿಂಗ್, ಟೆಂಡರ್ ಶೂರ್, ಇಂದಿರಾ ಕ್ಯಾಂಟೀನ್ಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ತನಿಖೆ ನಡೆಸಿ, ಮೂರು ತಿಂಗಳೊಳಗೆ ವರದಿ ನೀಡಬೇಕು ಎಂದು ಆಗ್ರಹಿಸಿದ್ದರು. ಆದ್ರೆ ಸದ್ಯ 6 ತಿಂಗಳಾದ್ರೂ ಇನ್ನು ಯಾವುದೇ ರೀತಿಯ ತನಿಖಾ ವರದಿ ಕೂಡ ಬಂದಿಲ್ಲ. ನಾವು ಮಾಡಿರುವುದೇ ಸರಿ ಎಂದು ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ಕೌನ್ಸಿಲ್ ಸಭೆಯಲ್ಲಿ ಹೇಳಿದರು.
ಗದ್ದಲ ಕೋಲಾಹಲದ ನಡುವೆ ಮಾತಾಡಿದ ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಅಧಿಕಾರ ಇರೋದು ಇನ್ನು ಆರು ತಿಂಗಳು ಮಾತ್ರ. ಸುಮ್ಮನೆ ಸಮಯ ವ್ಯರ್ಥ ಮಾಡದೆ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಸಲಹೆ ನೀಡಿದ್ರು.